September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಸೀಟು-ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತ್ಯು

ಬೆಳ್ತಂಗಡಿ:ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಗ್ರಾಮದ ಸೀಟು-ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ರಾಣಿಬೆನ್ನೂರು ತಾಲೂಕು ಹಾವೇರಿಯ ಮನೋಜ್ ಕುಮಾರ್ ಮತ್ತು ಮನೆಯವರು ಬೆಳ್ತಂಗಡಿ ಕಡೆಯಿಂದ ಕೊಟ್ಟಿಗೆಹಾರದ ಕಡೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಚಾಲಕ ಶ್ರೀಧರ ಸಣ್ಣ ನಿಂಗನವರ್ ಗಂಭೀರ ಗಾಯಗೊಂಡು ಉಜಿರೆಯ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಮನೋಜ್ ಕುಮಾರ್ ಅವರ ತಾಯಿ ರೆಜಿನಾ ಗ್ಲೋರಿ ಹಾಗೂ ತಂಗಿ ಪ್ರಾರ್ಥನಾ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಕರ್ನಾಟಕ ಮುಸ್ಲಿಂ ಜಮಾಅತ್ ಬಟ್ಲಡ್ಕ ಯುನಿಟ್ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಕೃಷಿ ಸಚಿವ ಚೆಲುವರಾಯ ಸ್ವಾಮಿ ಸೌತಡ್ಕ ದೇವಸ್ಥಾನಕ್ಕೆ ಭೇಟಿ

Suddi Udaya

ಕೌಟುಂಬಿಕ ವಿಚಾರದಲ್ಲಿ ಕಲಹ: ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಅಳಿಯ: ಮಿತ್ತಬಾಗಿಲು ಕಂಬಳದಡ್ಡದಲ್ಲಿ ನಡೆದ ಘಟನೆ

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪದವಿಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ

Suddi Udaya

ಗೇರುಕಟ್ಟೆ ಕೀರ್ತಿ ಶೇಷ ನರಸಿಂಹ ಮೂರ್ತಿ ಹಾಗೂ ಕೀರ್ತಿ ಶೇಷ ಸುರೇಶ್ ಪೈಯವರಿಗೆ ನುಡಿನಮನ ಹಾಗೂ ಸಂಸ್ಮರಣೆ ಯಕ್ಷಗಾನ ತಾಳಮದ್ದಳೆ 

Suddi Udaya

‘ಬೆಳ್ತಂಗಡಿ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ: ಮೂರು ದಿನಗಳ ಕಾಲ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಸಂಭ್ರಮ

Suddi Udaya
error: Content is protected !!