27.8 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

ಕೊಕ್ಕಡ: ಪ್ರಸಿದ್ಧ ಶ್ರದ್ಧಾ ಕೇಂದ್ರ , ಯಾತ್ರಾ ಸ್ಥಳವಾದ ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯು ಶುಭಾರಂಭಗೊಂಡಿತು.

ಬೆಳ್ತಂಗಡಿ ಯಲ್ ಐ ಸಿ ಅಭಿವೃದ್ಧಿ ಅಧಿಕಾರಿ ಉದಯ ಶಂಕರ್ ಕೆ ದೀಪ ಬೆಳಗಿಸಿ ಶುಭ ಹಾರೈಸಿದರು.

ಅರಸಿನಮಕ್ಕಿ ಗ್ರಾ ಪಂ ಉಪಾಧ್ಯಕ್ಷ ಸುಧೀರ್ ಕುಮಾರ್, ಗಣೇಶ್ ಕೆ ಹೊಸ್ತೋಟ, ಧರ್ಮಸ್ಥಳ ಬಿ ಜೆ ಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಕರುಣಾಕರ ಶಿಶಿಲ, ನಿವೃತ್ತ ಯೋಧ ಸುಭೇದಾರ್ ಮೇಜರ್ ಮಹಾಬಲ,ಗ್ರಾ ಪಂ ಸದಸ್ಯ ಪ್ರೇಮಚಂದ್ರ , ಸುಂದರ ರಾಣ್ಯ, ಕೃಷ್ಣಪ್ಪ ಗೌಡ ಪಡ್ಡಯಿಬೆಟ್ಟು ಹಾಗೂ ಮನೆಯವರು, ಹತ್ಯಡ್ಕ ಸಿ ಎ ಬ್ಯಾಂಕ್ ನಿರ್ದೇಶಕ ಮುರಳಿ ಶೆಟ್ಟಿಗಾರ್, ಶಿಶಿಲ ಗ್ರಾ ಪಂ ಅಧ್ಯಕ್ಷ ಸುಧೀನ್, ಹಿತೈಷಿಗಳು ಉಪಸ್ಥಿತರಿದ್ದರು.

ಮಳಿಗೆಯ ಮಾಲಕ ಸುದರ್ಶನ ಗೌಡ ಎಲ್ಲರನ್ನು ಸ್ವಾಗತಿಸಿ ಉದ್ಯಮಕ್ಕೆ ಎಲ್ಲರ ಬೆಂಬಲ ಕೋರಿದರು.

ಮಳಿಗೆಯಲ್ಲಿ ಕೆಎಂಎಫ್ ನಂದಿನಿ ಪ್ರಸಿದ್ಧ ಉತ್ಪನ್ನಗಳಾದ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಮೈಸೂರಪಾಕ್, ಐಸ್ ಕ್ರೀಮ್ ಮೊದಲಾದವು ಲಭ್ಯವಿದ್ದು ಶ್ರೀ ಕ್ಷೇತ್ರ ಕ್ಕೆ ಬರುವ ಭಕ್ತಾದಿಗಳ ಮನ ತಣಿಸಲಿವೆ.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಕುಮಾರ್ ಹೆಗ್ಡೆ

Suddi Udaya

ಡಿ.27: ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ಪಿಲ್ಯ: ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ

Suddi Udaya

ಪಟ್ರಮೆ: ಶ್ರೀಮತಿ ಮಂಜುಳಾ ನಿಧನ

Suddi Udaya

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಸೇವಾದಳದ ಕಾರ್ಯದರ್ಶಿಯಾಗಿ ಎಂ.ಕೆ. ಅಬ್ದುಲ್ ಸಮದ್ ಕುಂಡಡ್ಕ ನೇಮಕ

Suddi Udaya

ಶರತ್ ಮಡಿವಾಳ ಸ್ಮಾರಕಕ್ಕೆ ಪುಷ್ಪ ನಮನ

Suddi Udaya
error: Content is protected !!