ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಮಹಿಳೆಯ ಕುತ್ತಿಗೆಯಿಂದ ಸರ ಎಳೆದು ಪರಾರಿ ಪ್ರಕರಣ: 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು 24 ಗಂಟೆಯೊಳಗೆ ಬೆಳ್ತಂಗಡಿ ಪೊಲೀಸರು ಬಂಧಿಸಿ, ಸುಲಿಗೆ ಮಾಡಿಕೊಂಡು ಹೋಗಿದ್ದ ಚಿನ್ನದ ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.‌

ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ(ಜಾಲ್) ,ಡೆಂಬುಗ ನಿವಾಸಿ ಕೊರಗಪ್ಪ ಗೌಡರ ಮಗ ಉಮೇಶ್ ಗೌಡ(38) ಎಂಬಾತನನ್ನು ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹೆಚ್.ಎಮ್ ತಂಡದ ಸಿಬ್ಬಂದಿಗಳು ಕೊಯ್ಯೂರು ಗ್ರಾಮದ ಆದ್ರೂಪೆರಲ್ ಬಸ್ ನಿಲ್ದಾಣದಲ್ಲಿ ಡಿ.10 ರಂದು ಬೆಳಗ್ಗೆ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ವಿವಿರ: ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರು ಡಿ.9 ರಂದು ಮಧ್ಯಾಹ್ನ 2:35 ರ ಸುಮಾರಿಗೆ ಬೆಳ್ತಂಗಡಿಗೆ ಹೋಗಿ ವಾಪಸ್ ಮನೆಗೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್ ನಲ್ಲಿ ಇಳಿದು ಕೋರಿಯಾರ್ ಮನೆಗೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ(ಜಾಲ್) ,ಡೆಂಬುಗ ನಿವಾಸಿ ಕೊರಗಪ್ಪ ಗೌಡರ ಮಗ ಉಮೇಶ್ ಗೌಡ(38) ಎಂಬಾತ ಹಿಂದಿನಿಂದ ಓಡಿ ಬಂದು ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದು ಈ ವೇಳೆ ಕೈಯಲ್ಲಿ ಗಟ್ಟಿಯಾಗಿ ಹಿಡಿದು ಬೊಬ್ಬೆ ಹಾಕಿದಾಗ ಕರಿಮಣಿ ಎಳೆದ ರಭಸಕ್ಕೆ ಕುತ್ತಿಗೆ ,ಎದೆಗೆ ಗಾಯವಾಗಿದ್ದು ಕರಿಮಣಿ ಎರಡು ಭಾಗವಾಗಿದೆ ಒಂದು ತುಂಡು ಕರಿಮಣಿಯನ್ನು ಆರೋಪಿ ಉಮೇಶ್ ಗೌಡ ಸುಲಿಗೆ ಮಾಡಿಕೊಂಡು ಗುಡ್ಡದ ಕಡೆ ಓಡಿ ಪರಾರಿಯಾಗಿದ್ದಾನೆ. ಗಾಯಗೊಂಡ ರಾಜೀವಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಲಕ್ಷ ಮೌಲ್ಯದ 16 ಗ್ರಾಂ ಚಿನ್ನ ಸುಲಿಗೆ ಮಾಡಿರುವ ಬಗ್ಗೆ ಡಿ.9 ರಂದು 309(6)BNS ಅಡಿಯಲ್ಲಿ ಆರೋಪಿ ಉಮೇಶ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ
ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹೆಚ್.ಎಮ್,ಎಎಸ್ಐ ಶ್ರೀ ಕೆ.ಜೆ. ತಿಲಕ್,ಬೆನ್ನಿಚ್ಚನ್,ಜಗದೀಶ್‌ , ಗಂಗಾಧರ, ಚರಣ್ ರಾಜ್, ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ನಾವೂರು : ಕುಪ್ಲೊಟ್ಟು ನಿವಾಸಿ ಮೋನಪ್ಪ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಲಾಯಿಲ: ಕುಂಟಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸ ನೂತನ ಕಟ್ಟಡ ಉದ್ಘಾಟನೆ

Suddi Udaya

ನೆರಿಯ ಬಾಲಕ್ಕ ಶೆಟ್ಟಿ ನಿಧನ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು

Suddi Udaya

ಕಲ್ಮಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ವಾಣಿ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ವೀಕ್ಷಾ ಜೆ.ಪಿಗೆ ರಾಜ್ಯಮಟ್ಟದಲ್ಲಿ 8ನೇ ರ‍್ಯಾಂಕ್

Suddi Udaya
error: Content is protected !!