24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೋಟತ್ತಾಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

ತೋಟತ್ತಾಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ತೋಟತ್ತಾಡಿ, ಚಿಬಿದ್ರೆ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆಯು ಫೆ.11 ರಂದು ಸಂಘದ ವಠಾರದಲ್ಲಿ ನಡೆಯಿತು.

ವೈದಿಕ ವಿಧಿ ವಿಧಾನಗಳನ್ನು ಕಂಕನಾಡಿ ಗರಡಿಯ ಅರ್ಚಕರಾದ ಹರೀಶ್ ಶಾಂತಿ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶೇಖರ್ ಪೂಜಾರಿ ಕಳೆಂಜೊಟ್ಟು ಅಧ್ಯಕ್ಷತೆ ವಹಿಸಿದರು.

ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಹಾರಗಂಡಿ, ಕಾರ್ಯದರ್ಶಿ ಜಯನಂದ ಪೂಜಾರಿ ಡಿ ಮಜಲು, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾದ ಉಷಾ ರಾಮಾನಂದ ಪೂಜಾರಿ ಡಿ ಮಜಲು, ಹಿರಿಯ ಸದಸ್ಯ ಹೊನ್ನಪ್ಪ ಪೂಜಾರಿ ಉಜಿರೆ ಉಪಸ್ಥಿತರಿದ್ದರು.

ಈ ಸಂದರ್ಭ ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿ ಯು ಸಿ ಯಲ್ಲಿ 80% ಮೇಲ್ಪಟ್ಟು ಅಂಕಗಳಿಸಿದ 6 ವಿದ್ಯಾರ್ಥಿಗಳನ್ನು ಮತ್ತು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಹರೀಶ್ ಶಾಂತಿಯನ್ನು ಗೌರವಿಸಲಾಯಿತು.

ಗೌರವ ಸಲಹೆಗಾರರಾದ ಸನತ್ ಕುಮಾರ್ ಮೂರ್ಜೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಕುಮಾರಿ ಮೋಕ್ಷ ಕಜೆ ಪ್ರಾರ್ಥನೆ ಮಾಡಿದರು. ಗುರುದೇವ ಕಾಲೇಜಿನ ಪ್ರಾಧ್ಯಾಪಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ ) ಬೆಳ್ತಂಗಡಿ ಇದರ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಬೆಳ್ತಂಗಡಿಯ ಸಂಚಾಲಕಿ ಶಾಂತ ಬಂಗೇರ ಕುವೆಟ್ಟು ಸಂಘಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

Related posts

ಪುದುವೆಟ್ಟು ಓಂಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಉಜಿರೆ: ಎಸ್ ಡಿ ಎಂ ಕಾಲೇಜು ಆಶ್ರಯದಲ್ಲಿ ಅಧಿವಕ್ತ ಪರಿಷದ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ದಿನ ಆಚರಣೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಇಕೋಫ್ರೆಶ್ ಎಂಟರ್‌ ಪ್ರೈಸಸ್ ಬೆಳ್ತಂಗಡಿ-ಪುತ್ತೂರು ಇದರ ಸಹಯೋಗದೊಂದಿಗೆ ಜ.13 -18: ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ

Suddi Udaya

ಧರ್ಮಸ್ಥಳ: 22ನೇ ಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕರ ಸಭೆ

Suddi Udaya

ಎಕ್ಸೆಲ್ ನ ವಿದ್ಯಾರ್ಥಿಗಳು ಬನಾರಸ್ ಹಿಂದೂ ವಿ.ವಿ, ಎ ಐ ಐ ಎಂ ಎಸ್ ಭೋಪಾಲ್ ಸೇರಿ, ದೇಶದ ಅತ್ಯುನ್ನತ ಮೆಡಿಕಲ್ ಕಾಲೇಜುಗಳಲ್ಲಿ ಓದಿಗೆ ಆಯ್ಕೆ

Suddi Udaya
error: Content is protected !!