27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

ಬೆಳ್ತಂಗಡಿ :ಸೀರೋ ಮಲಬಾರ್ , ಮಲಂಕರ ಸಭೆ ಸೇರಿದಂತೆ ವಿವಿದ ಧರ್ಮ ಸಭೆಯ ಚರ್ಚ್ ಗಳಲ್ಲಿ ಲೋಕ ರಕ್ಷಕ, ಮಹಾನ್ ಮಾನವತಾವಾದಿ, ಸಹನೆ, ತ್ಯಾಗ ಮತ್ತು ಪ್ರೀತಿಯ ಮೂಲಕ ಲೋಕವನ್ನು ಗೆದ್ದ ಯೇಸು ಕ್ರಿಸ್ತರ ಯಾತನೆಯನ್ನು ನೆನಪಿಸುವ ಪಾಸ್ಕ ಕಾಲಕ್ಕೆ ಕ್ರೈಸ್ತರು ವಿವಿದ ಚರ್ಚ್ ಗಳಿಗೆ ಇಂದು ಮುಂಜಾನೆ ತೆರಳಿ ಪೂಜಾರ್ಪಣೆ ಯಲ್ಲಿ ಭಾಗವಹಿಸಿ ಹಣೆಗೆ ಆಶೀರ್ವದಿಸಿದ ವಿಭೂತಿಯನ್ನು ಧರ್ಮ ಗುರುಗಳಿಂದ ಹಚ್ಚಿ ವ್ರತಾನುಷ್ಟಾನಕ್ಕೆ ಪ್ರವೇಶ ಪಡೆದರು.

ಇಂದಿನಿಂದ ಸಾಮಾನ್ಯವಾಗಿ ಕ್ರೈಸ್ತರು ಮಾಂಸ ಆಹಾರವನ್ನು ತ್ಯಜಿಸಿ ಸಂಪೂರ್ಣ ಶಾಖಾಹಾರಿಗಳಾಗಿ ಬದಲಾಗುತ್ತಾರೆ. ಪ್ರತಿ ದಿನ ಪೂಜೆಯಲ್ಲಿ ಭಾಗವಹಿಸಿ ಶಿಲುಬೆಯ ಹಾದಿಯ ಪ್ರಾರ್ಥನೆ ಯನ್ನು, ಮನೆಗಳಲ್ಲಿ ಚರ್ಚ್ ಗಳಲ್ಲಿ ಮಾಡುವುದು ಈ ಸಂದರ್ಭದ ವಿಶೇಷ, ಮಾಡಿದ ತಪ್ಪುಗಳಿಗೆ ಪರಿಹಾರ ಮತ್ತು ಪಾಪ ವಿಮುಕ್ತಿ ಪಡೆಯುವುದು ಈ ವ್ರತಾಚರಣೆಯ ದಿನಗಳ ವಿಶೇಷತೆಯಾಗಿದೆ. ಇಂದಿನಿಂದ ಈಸ್ಟರ್ ವರೆಗಿನ ಐವತ್ತು ದಿನಗಳ ವರೆಗೆ ಈ ವ್ರತಚಾರಣೆ ನಡೆಯಲಿದೆ. ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು, ಫಾ. ಆಶೀಲ್ ನೇತೃತ್ವ ವಹಿಸಿದರು.

Related posts

ಬೆಳ್ತಂಗಡಿ ಸರ್ಕಾರಿ ಮಾದರಿ ಹಿ.ಪ್ರಾ ಶಾಲೆಯಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

Suddi Udaya

ತೆಂಕಕಾರಂದೂರು: ಶ್ರೀ ಸಂತಾನ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾಮಹೋತ್ಸವ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಸಹಿಪ್ರಾ ಶಾಲೆ ಹಳೇಪೇಟೆಗೆ ಗ್ರೀನ್ ಬೋರ್ಡ್ ಹಸ್ತಾಂತರ

Suddi Udaya

ಬಂದಾರು: ಕುಂಟಾಲಪಲ್ಕೆ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಪುನರ್ ರಚನೆ

Suddi Udaya
error: Content is protected !!