September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಸದಸ್ಯರಿಗೆ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ತರಬೇತಿ

ಬೆಳ್ತಂಗಡಿ : ಫೆಬ್ರವರಿ 12, ರಂದು, ಜೆಸಿಐ ಬೆಳ್ತಂಗಡಿ ಮಂಜುಶ್ರೀ ತನ್ನ ಸದಸ್ಯರಿಗಾಗಿ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ಟ್ರೈನಿಂಗ್ (ಎಲ್‌.ಡಿ.ಎಂ.ಟಿ) ತರಬೇತಿಯನ್ನು ಆಯೋಜಿಸಿತು

ಜೆಸಿಐ ಬೆಳ್ತಂಗಡಿಯ ಪದಾಧಿಕಾರಿಗಳಿಗೆ ಜೆಸಿಯ ಅವಕಾಶಗಳು, ಆಂತರಿಕ ನಡಾವಳಿಗಳು ಮತ್ತು ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತರಬೇತಿಯನ್ನು ಜೆಸಿಐನ ವಲಯ XV ರ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್ ವಿಭಿನ್ನ ರೀತಿಯಲ್ಲಿ ನಡೆಸಿಕೊಟ್ಟರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ರಂಜಿತ್ ಎಚ್‌ ಡಿ, ಬಳಂಜ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು.

ಸಭಾ ವೇದಿಕೆಯಲ್ಲಿ ಮಹಿಳಾ ವಿಭಾಗದ ಸಂಯೋಜಕಿ ಶ್ರುತಿ ರಂಜಿತ್, ಕಾರ್ಯಕ್ರಮದ ಸಂಯೋಜಕರಾದ ಪ್ರಮೋದ್ ಕೆ ಉಪಸ್ಥಿತರಿದ್ದರು.

ಸದಸ್ಯ ರಜತ್ ಮೊರ್ತಜೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.

ಜೆಸಿ ವಾಣಿಯನು ಘಟಕದ ಜೊತೆ ಕಾರ್ಯದರ್ಶಿ ರಾಮಕೃಷ್ಣ ಶರ್ಮಾ ಉದ್ಘೋಷಿಸಿದರು .

ವಲಯ ಉಪಾಧ್ಯಕ್ಷರ ಪರಿಚಯವನ್ನು ಸದಸ್ಯೆ ಸ್ವಾತಿ ಪ್ರೀತೇಶ್ ವಾಚಿಸಿದರು,

ಘಟಕದ ಪೂರ್ವಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಘಟಕದ ಕಾರ್ಯದರ್ಶಿ ಅನುದೀಪ್ ಜೈನ್ ಸರ್ವರಿಗೂ ಧನ್ಯವಾದವಿತ್ತರು.

Related posts

ಇಳoತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

Suddi Udaya

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆ ಆರಂಭ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ಪದ್ಮುಂಜ ಹಾಲು ಉತ್ಪಾದಕರ ಸ. ಸಂಘದಿಂದ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ

Suddi Udaya

ಬಳಂಜ ಶಾಲೆಗೆ ಹಳೆವಿದ್ಯಾರ್ಥಿಗಳಿಂದ ಎರಡು ಟಿವಿ ಕೊಡುಗೆ

Suddi Udaya

ಸುಲ್ಕೇರಿ: ಇರಂತೊಟ್ಟು ಹೊಸಮನೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya
error: Content is protected !!