24.1 C
ಪುತ್ತೂರು, ಬೆಳ್ತಂಗಡಿ
September 6, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಡಗಕಾರಂದೂರು ಶಾಲೆಯಲ್ಲಿ ಪರಿಸರ ದಿನಾಚರಣೆ – ಪುಸ್ತಕ ಪೂಜೆ

ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಡಗಕಾರಂದೂರು ಇಲ್ಲಿಯ ಇಕೋ ಕ್ಲಬ್ ವತಿಯಿಂದ ಪರಿಸರ ದಿನಾಚರಣೆಯನ್ನು ಹಣ್ಣಿನ ಗಿಡಗಳನ್ನು ನೇಡುವುದರೊಂದಿಗೆ ಆಚರಿಸಲಾಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷ ಶಶಿಕಾಂತ ನಾಯಕ, ಉಪಾಧ್ಯಕ್ಷೆ ರೂಪ, ಸದಸ್ಯರಾದ ಆನಂದ ಪೂಜಾರಿ, ಶೇಖರ ಆಚಾರ್ಯ ಉಪಸ್ಥಿತರಿದ್ದರು. ತದನಂತರ ಪುಸ್ತಕ ಪೂಜೆಯನ್ನು ಮಾಡುವುದರೊಂದಿಗೆ ಶಾರದಾ ಮಾತೆಯನ್ನು ಮಕ್ಕಳು ಭಜನೆಯ ಮೂಲಕ ಸ್ತುತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಶಶಿಕಾಂತ್ ನಾಯಕ್ ದೀಪ ಪ್ರಜ್ವಲನೆ ಗೈದರು.


ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಸರ್ವ ಸದಸ್ಯರು ಭಜನೆಯಲ್ಲಿ ಪಾಲ್ಗೊಂಡರು. ಮುಖ್ಯ ಶಿಕ್ಷಕಿ ಸುಜಾತಾ ಸ್ವಾಗತಿಸಿ, ಸಹಶಿಕ್ಷಕಿ ಶಾಲಿನಿ ಧನ್ಯವಾದವನ್ನಿತ್ತರು. ಸಹಶಿಕ್ಷಕಿ ಮಂಗಳಾ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ವತಿಯಿಂದ ಅನಿಯಮಿತ ವಿದ್ಯುತ್ ಕಡಿತದ ಬಗ್ಗೆ ಬೆಳ್ತಂಗಡಿ ಮೆಸ್ಕಾಂ ಅಧಿಕಾರಿಗೆ ಮನವಿ

Suddi Udaya

ಬೆಳ್ತಂಗಡಿ ನಗರದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ: ರಾತ್ರೋ ರಾತ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿದ ನಾಗರೀಕರು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ ಆಚರಣೆ

Suddi Udaya

ಎಕ್ಸೆಲ್ ಗುರುವಾಯನಕೆರೆ: ಸಿ.ಇ.ಟಿ.ಯಲ್ಲಿ ಎಂದಿನಂತೆ ರ‍್ಯಾಂಕ್ ಗಳ ಸುರಿಮಳೆ : ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಕುವೆಟ್ಟು ಸ.ಉ.ಪ್ರಾ.ಶಾಲೆಯ ಎಲ್ ಕೆ ಜಿ -ಯು ಕೆ ಜಿ ವಿಭಾಗದ ಹೊರಾಂಗಣ ಆಟದ ಸಲಕರಣೆಗಳ ಉದ್ಘಾಟನೆ

Suddi Udaya

ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!