ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇದರ ತಾಲೂಕು ಕಾರ್ಯಕಾರಿ ಸಮಿತಿ ಸಭೆ ಹಾಗೂ ವಲಯವಾರು ಸಾಧನಾ ವರದಿ ಪ್ರಸ್ತುತಿ ಕಾರ್ಯಕ್ರಮ ಫೆ.13 ರಂದು ಬೆಳ್ತಂಗಡಿ ಪಿನಾಕಿ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.
ಉದ್ಘಾಟನೆಯನ್ನು ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ನೆರವೇರಿಸಿದರು.
ವೇದಿಕೆಯಲ್ಲಿ ವೇದಿಕೆಯ ಪೂರ್ವಾಧ್ಯಕ್ಷರುಗಳಾದ ಬೆಳಾಲು ತಿಮ್ಮಪ್ಪ ಗೌಡ, ಡಿ.ಎ ರಹಿಮಾನ್, ಪಿ.ಕೆ ರಾಜು ಪೂಜಾರಿ, ಶಾರದಾ ಆರ್ ರೈ, ಅಡೂರು ವೆಂಕಟ್ರಾಯ ಉಪಸ್ಥಿತರಿದ್ದರು.
ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಮುಂದಿನ ಯೋಜನಾ ಗುರಿ ಮತ್ತು ಕಾರ್ಯಯೋಜನೆಯ ಬಗ್ಗೆ ವಿವರಣೆ ನೀಡಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹಾಜರಿದ್ದರು.
ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ, ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಕಾರ್ಯಕ್ರಮ ಸಂಯೋಜಿಸಿದರು.
ಬೆಳ್ತಂಗಡಿ ಯೋಜನಾ ಕಚೇರಿ ವ್ಯಾಪ್ತಿಯ ವರದಿಯನ್ನು ಮೇಲ್ವಿಚಾರಕಿ ವಿದ್ಯಾ ಮತ್ತು ಜ್ಞಾನ ವಿಕಾಸ ಕಾರ್ಯಕ್ರಮಗಳ ಮೇಲ್ವಿಚಾರಕಿ ಮಧುರಾ ಪ್ರಗತಿವರದಿ ಮಂಡಿಸಿದರು.
ಕೃಷಿ ಮೇಲ್ವಿಚಾರಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.