24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಅರಸಿನಮಕ್ಕಿ: ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ನೆರವೇರಿಸಿ ಶುಭ ಹಾರೈಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ ಉಪಸ್ಥಿತರಿದ್ದು ಮಾತನಾಡಿ 2009ರಲ್ಲಿ ಈ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆಗಲೇ ಹೊಸ ಕಟ್ಟಡದ ಅವಶ್ಯಕತೆ ಕಾಡುತ್ತಿತ್ತು. ಈಗ ಅದು ನೆರವೇರತ್ತಿರುವುದು ತುಂಬಾ ಸಂತಸವಾಗುತ್ತಿದೆ. ಒಳ್ಳೆಯ ಕಟ್ಟಡ ನಿರ್ಮಾಣವಾಗಿ ಇನ್ನಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.


ಪಂಚಾಯತ್‌ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ ಎಸ್ ಮಾತನಾಡಿ ಕಾಲೇಜಿಗೆ ಕೊಠಡಿ ಅವಶ್ಯಕತೆ ಮೊದಲಿಂದಲೂ ಇತ್ತು. ಶಾಸಕರ ಪ್ರಯತ್ನದಿಂದ ರೂ. 55 ಲಕ್ಷ ಅನುದಾನ ದೊರೆತಿದ್ದು ಅನುಕೂಲವಾಯಿತು. ಇನ್ನು ಹೈಸ್ಕೂಲ್ ಗೆ ಕೂಡ ಕೊಠಡಿ ಅವಶ್ಯಕತೆ ಬಹಳ ಇದ್ದು ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.


ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ನಾಯಕ್‌ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್‌ ಸದಸ್ಯರಾದ ವಾಮನ ತಾಮನ್ನ‌ರ್, ಅರಿಕೆಗುಡ್ಡೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಗಣೇಶ್ ಕೆ ಹೊಸ್ತೋಟ, ಹತ್ಯಡ್ಕ ಪ್ರಾ.ಕೃ.ಪ.ಸ.ಸ ನಿರ್ದೇಶಕರಾದ ಮುರಳಿಧರ್ ಶೆಟ್ಟಿಗಾ‌ರ್, ವೃಶಾಂಕ್ ಖಾಡಿಲ್ಕರ್, ಕಾಲೇಜು ಪ್ರಿನ್ಸಿಪಾಲ್ ರಾಮಯ್ಯ ಶೆಟ್ಟಿ, ಹೈಸ್ಕೂಲ್ ಮುಖ್ಯಗುರುಗಳಾದ ಚಂದ್ರು, ಕಾಲೇಜು ಉಪನ್ಯಾಸಕರುಗಳು, ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ರಾಮಯ್ಯ ಶೆಟ್ಟಿ ಸ್ವಾಗತಿಸಿ , ರಾಘವೇಂದ್ರ ನಾಯಕ್ ಧನ್ಯವಾದವಿತ್ತರು.

Related posts

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಸಂಪನ್ನ

Suddi Udaya

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

Suddi Udaya

ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆಲ್ಕೋ ಇಂಡಿಯಾ ಫೌಂಡೇಶನ್ ವತಿಯಿಂದ ಸೌರ ವಿದ್ಯುತ್ ಘಟಕ ಹಸ್ತಾಂತರ

Suddi Udaya

ಉಜಿರೆ ಮಾಚಾರು ಜಾತಿ ನಿಂದನೆ ಮಾಡಿ ಹಲ್ಲೆ ಆರೋಪ: ಯುವಕ ಆಸ್ಪತ್ರೆಗೆ ದಾಖಲು

Suddi Udaya

ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸೂಚನೆ: ಇ-ಕೆವೈಸಿ ಮಾಡಲು ಡಿ.31 ಕೊನೆಯ ದಿನ

Suddi Udaya
error: Content is protected !!