25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಕಡಿರ ನಾಗಬನದಲ್ಲಿ ನಾಗದೇವರಿಗೆ ತಂಬಿಲ ಸೇವೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಇತ್ತೀಚೆಗೆ ಪುನಹ ಪ್ರತಿಷ್ಠಾಪಿಸಲ್ಪಟ್ಟ ನಾಗದೇವರಿಗೆ ಕಡಿರ ನಾಗಬನದಲ್ಲಿ ಇಂದು ಪಂಚಮಿ ಪ್ರಯುಕ್ತ ತಂಬಿಲಸೇವೆ ನಡೆಯಿತು.

ಈ ಹಿಂದೆ ಕೃಷ್ಣ ಚಿಂತನೆಯಲ್ಲಿ ಕಂಡುಬಂದಂತೆ ವರ್ಷಂ ಪ್ರತಿ ಮೂಡಪ್ಪ ಸೇವೆಯ ಮರುದಿನ ಪಂಚಮಿಯಂದು ಕ್ಷೇತ್ರದ ವತಿಯಿಂದ ನಾಗದೇವರಿಗೆ ತಂಬಿಲ ಸೇವೆ ನಡೆಸುವಂತೆ ಕಂಡುಬಂದಿತ್ತು. ಆ ಪ್ರಯುಕ್ತ ಇಂದು ಪ್ರಥಮವಾಗಿ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು, ಕ್ಷೇತ್ರದ ಅರ್ಚಕರಾದ ಸುಬ್ರಮಣ್ಯ ತೋಡ್ತಿಲ್ಲಾಯರು ಪೂಜೆಯನ್ನು ನೆರವೇರಿಸಿದರು.

ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಕೆ ವಿ.ಮತ್ತು ಕೊರಗಪ್ಪ ಶೆಟ್ಟಿ ಮುಂಡ್ರೆಲು, ಬಾಲಕೃಷ್ಣ ನೈಮಿಶ ಹಾಗೂ ಸುಬ್ರಹ್ಮಣ್ಯ ಪರ್ಲಾಯರು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

Suddi Udaya

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ: ವಾರ್ಷಿಕ 150 ಕೋಟಿ ವ್ಯವಹಾರ ಮಾಡಿ 69 ಲಕ್ಷ ನಿವ್ವಳ ಲಾಭ ಗಳಿಸಿದ್ದೇವೆ: ನವೀನ್ ಕೆ ಸಾಮಾನಿ

Suddi Udaya

ನಾಲ್ಕೂರು : ಕಾಂಗ್ರೆಸ್ ಕಾರ್ಯಕರ್ತರು ಹಲವು ಮಂದಿ ಬಿಜೆಪಿ ಸೇರ್ಪಡೆ

Suddi Udaya

ಕಾಶಿಪಟ್ಣ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಆಯ್ಕೆ

Suddi Udaya

ಜೈನ ಮುನಿ ಹತ್ಯೆ ಪ್ರಕರಣ ಸೂಕ್ತ ಕ್ರಮ ಕೈಗೊಳ್ಳುವಂತೆ ದಿನೇಶ್ ಗುಂಡೂರಾವ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

Suddi Udaya

ತೆಂಕಕಾರಂದೂರು: ಖಂಡಿಗ ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನದ ಆವರಣ ತಡೆಗೋಡೆ ಕುಸಿತ

Suddi Udaya
error: Content is protected !!