24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಜೆ ಇ ಇ ಮೈನ್ಸ್ ನಲ್ಲಿ ಅತ್ಯುತ್ತಮ ಫಲಿತಾಂಶ

ಬೆಳ್ತಂಗಡಿ: ರಾಷ್ಟ್ರ ಮಟ್ಟದ ಉನ್ನತ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳಾದ ಐಐಟಿ , ಎನ್ ಐ ಐ ಟಿ ಗಳ ಪ್ರವೇಶಾತಿಗಾಗಿ ನಡೆಯುವ ಜೆ ಇ ಇ ಮೈನ್ಸ್ ನ ಮೊದಲ ಸ್ಲಾಟ್ ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.

ಪ್ರಜ್ವಲ್ ಎಚ್. ಎಂ 99.8869 ಶೇ, ಅಭಿಷೇಕ್ 98.7072 ಶೇ, ನೌಮನ್ ಶೇಕ್ 98.6863 ಶೇ, ,ಚಿನ್ಮಯ್ ವೈ.ಕೆ 98.3301, ಸಿಂಚನ್ 97.8593, ಮಹಾದೇವ ಸ್ವಾಮಿ 97.5002, ಶಾಶ್ವತ್ ಎಸ್. ಪಿ 96.69, ತನ್ವಿ ಆರ್ ಟಿ 96.56, ಸಿದ್ಧಾರ್ಥ್ ಎಚ್ ಆರ್ 96.47, ರಿಷ್ವಿತ್ ಶೆಟ್ಟಿ 95.81, ಧ್ಯಾನ್ 95. 39 ಪರ್ಸಂಟೇಲ್ ಪಡೆದಿದ್ದಾರೆ. ಎಕ್ಸೆಲ್ ಪದವಿ ಪೂರ್ವ ಕಾಲೇಜಿನ 72 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳು 90 ಶೇಕಡಾ ಪರ್ಸಂಟೇಲ್ ಪಡೆದು ಕೊಂಡಿದ್ದಾರೆ.


ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್ , ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಯಾದ ಸಿ ಇ ಟಿ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ನಾಟಾ ಮೊದಲಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಅತ್ಯಂತ ಪ್ರತಿಭಾವಂತ, ದಕ್ಷಿಣ ಭಾರತದಲ್ಲೆ ಹೆಸರುವಾಸಿಯಾದ ಉಪನ್ಯಾಸಕ ರಿಂದ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ಕೊಡಿಸಲಾಗುತ್ತಿದೆ. ಎಕ್ಸೆಲ್ ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಹೆಸರು ವಾಸಿಯಾದ AIIMS, IIT,NIIT, ಹಾಗೂ ಸುಪ್ರಸಿದ್ಧ ವೈದ್ಯಕೀಯ ಹಾಗೂ ಎಂಜನಿಯರಿಂಗ್ ಕಾಲೇಜುಗಳಲ್ಲಿ ಮೆರಿಟ್ ಕೋಟಾದಡಿ ಸೀಟ್ ಪಡೆದು ಅಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ , ಮಧ್ಯಮ ವರ್ಗದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆಯಾದ ಎಕ್ಸೆಲ್ ಇಂದು ರಾಜ್ಯ ಹಾಗೂ ನೆರೆ ರಾಜ್ಯಗಳ ಮೂಲೆ ಮೂಲೆಗಳಿಂದ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.


ಜೆ ಇ ಇ ಮೈನ್ಸ್ , ಮೊದಲ ಸ್ಲಾಟ್ ನಲ್ಲಿ ಅತ್ಯುತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳ ನ್ನು ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ನಡ: ಸಿಡಿಲು ಬಡಿದು 2 ವರ್ಷದ ಮಗು ಅಸ್ವಸ್ತ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರದಲ್ಲಿ ಸಾನಿಧ್ಯ ದೈವಗಳ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ

Suddi Udaya

ಉರುವಾಲು: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯಲ್ಲಿ “ಶುಚಿ ಜೀವನ ದರ್ಶನ” ವಿಷಯದ ಕುರಿತು ಚಿಂತನ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನೆ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2025

Suddi Udaya

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುವ ವೇಳೆ ಮಹಿಳೆಯ ಕೊರಳಿನಿಂದ ರೂ.1.44 ಲಕ್ಷ ಮೌಲ್ಯದ 36 ಗ್ರಾಂ ಚಿನ್ನದ ಸರ ಕಳವು

Suddi Udaya
error: Content is protected !!