ಫೆ.17-26: ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ

Suddi Udaya

ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಫೆ.17 ರಿಂದ ಫೆ.26 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಫೆ.17ರಂದು ಬೆಳಿಗ್ಗೆ 10ಕ್ಕೆ ಕಾರ್ಯಾಲಯ ಉದ್ಘಾಟನೆ, ಸಂಜೆ 5.00ಕ್ಕೆ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 6ಕ್ಕೆ ಉಗ್ರಾಣ ಉದ್ಘಾಟನೆ ಜರುಗಲಿದೆ.
ಫೆ.18 ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ, ಬೆಳಿಗ್ಗೆ 8.00ಕ್ಕೆ ವನದುರ್ಗಾ ಭೋಜನಾಲಯ ಉದ್ಘಾಟನೆ, ಬೆಳಿಗ್ಗೆ 9.30ಕ್ಕೆ ಹೊರೆಕಾಣಿಕೆ ಮೆರವಣಿಗೆ ಉದ್ಘಾಟನೆ ಜರುಗಲಿದ್ದು ಅರಸಿನಮಕ್ಕಿ ಕೇಂದ್ರ ಮೈದಾನದಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ನೀಡಿರುವ ಪೂಜಾಪರಿಕರಗಳು, ಶ್ರೀ ದೇವರ ವಿಗ್ರಹ, ಹೊರೆಕಾಣಿಕೆ, ಬ್ರಹ್ಮಕಲಶೋತ್ಸವದ ಅನ್ನದಾನಕ್ಕೆ ಭಕ್ತರು ನೀಡಿದ ಅಕ್ಕಿ ಸಮರ್ಪಣೆಯ ವೈಭವದ ಆಕರ್ಷಕ ಮೆರವಣಿಗೆ ನಡೆಯಲಿದೆ. ಅಂದು ಹತ್ಯಡ್ಕ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ಜರುಗಲಿದ್ದು ಸಂಜೆ ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ರಾತ್ರಿ ಅರಸಿನಮಕ್ಕಿ, ನಾವಳೆ, ಕುಂಟಾಲಪಳಿಕೆ, ಹೊಸ್ತೋಟ ಅಂಗನವಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜರುಗಲಿದೆ.


ಫೆ.19ರಂದು ಶಿಬಾಜೆ ಗ್ರಾಮಸ್ಥರಿಂದ ಹೊರೆಕಾಣಿಕೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ರಾತ್ರಿ ಭಕ್ತಿಸಂಗೀತ, ಶ್ರೀ ರಾಘವೇಂದ್ರ ಕಿಗ್ಗ ಮತ್ತು ಬಳಗ ಶೃಂಗೇರಿ ಇವರಿಂದ ಹಾಸ್ಯಮಯ ನಾಟಕ “ಮೂರು ಮುತ್ತು” ಜರುಗಲಿದೆ.
ಫೆ.20 ರಂದು ಶಿಶಿಲ ಗ್ರಾಮಸ್ಥರಿಂದ ಹೊರೆಕಾಣಿಕೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ರಾತ್ರಿ ವನದುರ್ಗಾ ಗೆಳೆಯರ ಬಳಗ ಅರಿಕೆಗುಡ್ಡೆ ಇವರ ಪ್ರಾಯೋಜಕತ್ವದಲ್ಲಿ ವಿಜಯಕುಮಾರ್ ಕೋಡಿಯಾಲ್‌ಬೈಲ್ ರಚನೆ ನಿರ್ದೇಶನದ ಭಕ್ತಿ ಪ್ರಧಾನ ನಾಟಕ “ಶಿವಧೂತೆ ಗುಳಿಗೆ” ಜರುಗಲಿದೆ.


ಫೆ.21ರಂದು ಅಮ್ಮಾಜೆ-ಶಿರಾಡಿ ಗ್ರಾಮಸ್ಥರಿಂದ ಹೊರೆಕಾಣಿಕೆ, ಭಜನಾ ಕಾರ್ಯಕ್ರಮ, ರಾತ್ರಿ ಊರವರಿಂದ ಕಲಾ ವೈವಿಧ್ಯ ಜರುಗಲಿದೆ.
ಫೆ.22ರಂದು ರೆಖ್ಯಾ ಗ್ರಾಮಸ್ಥರಿಂದ ಹೊರೆಕಾಣಿಕೆ, ಶ್ರೀ ದೇವರ ಪ್ರತಿಷ್ಠೆ, ಸಂಜೆ ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ರಾತ್ರಿ ಮೂಲ್ಕಿ ನವವೈಭವ ಕಲಾವಿದರಿಂದ ತುಳುನಾಡ ವೈಭವ ಜರುಗಲಿದೆ.
ಫೆ.23 ರಂದು ಕಳೆಂಜ-ಕಾಯರ್ತಡ್ಕ ಗ್ರಾಮಸ್ಥರಿಂದ ಹೊರೆಕಾಣಿಕೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ರಾತ್ರಿ ಭಕ್ತಿ ರಸಮಂಜರಿ ಆರ್.ಎಸ್ ಮೆಲೋಡೀಸ್ ಮಂಗಳೂರು ಇವರಿಂದ
ಫೆ.24 ರಂದು ಕೊಕ್ಕಡ ಗ್ರಾಮಸ್ಥರಿಂದ ಹೊರೆಕಾಣಿಕೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ರಾತ್ರಿ ಶ್ರೀಮತಿ ಅಂಕಿತಾ ಮತ್ತು ವರುಣಾ ದಾದುಕೋಡಿ, ಅಖಿಲೇಶ್ ಟಿ. ಪಿಲಿಕ್ಕಬೆ, ಪ್ರಾಯೋಜಕತ್ವದಲ್ಲಿ ಶ್ರೀ ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿ ಗಾನಸುಧೆ.
ಫೆ.25ರಂದು ಬ್ರಹ್ಮಕಲಶಾಭಿಷೇಕ, ರಾತ್ರಿ ಶ್ರೀ ವನದುರ್ಗಾ ದೇವರ ಭಕ್ತರಿಂದ ಆಕರ್ಷಕ ಸುಡುಮದ್ದು ಪ್ರದರ್ಶನ, ನಂತರ ಉಭಯ ಜಿಲ್ಲೆಯ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರಭಾತ ಯಕ್ಷಗಾನ ಸಂಘ, ಭಂಡಿಹೊಳೆ ಇವರಿಂದ ಯಕ್ಷಗಾನ ಬಯಲಾಟ “ಶ್ರೀ ದೇವಿ ವನದುರ್ಗೆ” (ಶಾಂಭವಿ ವಿಜಯ) ನಡೆಯಲಿದೆ.
ಫೆ.26ರಂದು ಪುಣ್ಯಾಹ, ಮಂಗಲ ಗಣಯಾಗ, ಕಲಶಾಭಿಷೇಕ, ಸಂಪ್ರೋಕ್ಷಣ ಮಂತ್ರಾಕ್ಷತೆ ನಡೆಯಲಿದೆ.

Leave a Comment

error: Content is protected !!