ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುದ್ದತೆಗೆ ಹೆಸರುವಾಸಿದ 70ವರ್ಷಗಳ ಪರಂಪರೆಯಿರುವ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಕರಿಮಣಿ ಉತ್ಸವವನ್ನು ಫೆ. 15 ರಂದು ನಡೆಯಿತು.
ಫೆ.15 ರಿಂದ 29 ರವರೆಗೆ ನಡೆಯಲಿರುವ ಕರಿಮಣಿ ಉತ್ಸವಕ್ಕೆ ಯುವವಾಹಿನಿ ಬೆಳ್ತಂಗಡಿ ಘಟಕದ ಪೂರ್ವಾಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ ದೀಪ ಪ್ರಜ್ವಲನೆ ಮಾಡಿ ಕರಿಮಣಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ನಗುಮೊಗದ ಸೇವೆಯಿಂದ ಮುಳಿಯ ಸಂಸ್ಥೆ ಯಶಸ್ವಿ ಶಿಖರವನ್ನು ತಲುಪಿದೆ ಎಂದರು.ಮುಳಿಯ ಮಾರ್ಕೆಟಿಂಗ್ ಕನ್ಸಲ್ಟನ್ಸಿ ವೇಣುಗೋಪಾಲ್ ಶರ್ಮ ಮಾತನಾಡಿ ವೆರೈಟಿ ಆಭರಣಕ್ಕೆ ಮುಳಿಯ ಜ್ಯುವೆಲ್ಸ್ ಹೆಸರುವಾಸಿಯಾಗಿದ್ದು 500 ಬಗೆಯ ವಿವಿಧ ವೆರೈಟಿಯ ಕರಿಮಣಿ ಆಭರಣಗಳು ಇವೆ.
ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ವೇದಿಕೆಯಲ್ಲಿ ಮುಳಿಯ ಎಕ್ಸಿಕ್ಯುಟಿವ್ ಅಫೀಸರ್ ಶಿವ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.
ಮುಳಿಯ ಬೆಳ್ತಂಗಡಿ ಶಾಖೆಯ ಮ್ಯಾನೇಜರ್ ಅಶೋಕ್ ಬಂಗೇರ ಸ್ವಾಗತಿಸಿದರು.
ಶಾಖ ಉಪ ಪ್ರಬಂಧಕ ದಿನೇಶ್ ರಾವ್ ವಂದಿಸಿದರು. ಸಿಬ್ಬಂದಿ ಜಯಲಕ್ಷ್ಮಿ ನಿರೂಪಿಸಿದರು. ಕಾರ್ಯಕ್ರಮದಲ್ಕಿ ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಶಾಂತ ಬಂಗೇರ, ಮುಳಿಯ ಶಾಖಾ ಉಪ ವ್ಯವಸ್ಥಾಪಕ ಲೋಹಿತ್ , ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.