23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯಾಭ್ಯಾಸ ಮುಗಿಸಿ E.S. ಆಸ್ಪತ್ರೆ ಬೆಂಗಳೂರು, ಆರೋಗ್ಯ ಕೇಂದ್ರ ಕೊಕ್ಕಡ, ಸಮುದಾಯ ಆರೋಗ್ಯ ಕೇಂದ್ರ ಬೆಳ್ತಂಗಡಿ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರ, ವೇಣೂರು ಇಲ್ಲಿ ಸುಮಾರು 37 ವರ್ಷಗಳ ಕಾಲ ಬಡರೋಗಿಗಳ ಜೊತೆ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶ್ರೀಮತಿ ವಿಜಯ ಕುಮಾರಿ ಕೆ ಇವರ ಸೇವೆಯನ್ನ ಗೌರವಿಸುತ್ತ ಫೆ. 12 ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಲ್ಲಿ ನಡೆದ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯ ಅಧ್ಯಕ್ಷರಾದ ಜೆಸಿ HGF ರಂಜಿತ್ ಎಚ್ ಡಿ ಯವರು ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಕಾರ್ಯಕ್ರಮದಲ್ಲಿ ವಲಯದ ಉಪಾಧ್ಯಕ್ಷರಾದ JFM ಶಂಕರ್ ರಾವ್ ಬಿ, ಲೇಡಿ ಜೆಸಿ ಸಂಯೋಜಕರಾದ ಜೆಸಿ ಶ್ರುತಿ ರಂಜಿತ್, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ ಪ್ರೀತಮ್ ಶೆಟ್ಟಿ, ಜೆಸಿ ಪ್ರಮೋದ್, ಘಟಕದ ಪೂರ್ವಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ನಂತರ ಜೆಸಿ ಕುಟುಂಬ ಸದಸ್ಯರಿಗೆ “ಜೆಸಿ ಸಂಭ್ರಮ” ಕುಟುಂಬೋತ್ಸವ ಕಾರ್ಯಕ್ರಮವು ಘಟಕದ ಉಪಾಧ್ಯಕ್ಷರಾದ
ಪ್ರೀತಮ್ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಜೆಸಿ ಸಚಿನ್ ಸಾಲಿಯಾನ್ ಇವರ ನಿರೂಪಣೆಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ವೇದಿಕೆ ಅಹ್ವಾನವನ್ನು ಜೆಸಿ ರಜತ್, ಜೆಸಿ ವಾಣಿನ್ನು ಜೆಸಿ ರಾಮಕೃಷ್ಣ, ಹಾಗೂ ಸನ್ಮಾನ ಪತ್ರವನ್ನು ಜೆಸಿ ಮಾಮಿತಾ ಸುಧೀರ್ ವಾಚಿಸಿದರು. ಕಾರ್ಯದರ್ಶಿ ಜೆಸಿ ಅನುದೀಪ್ ಜೈನ್ ಧನ್ಯವಾದ ಸಲ್ಲಿಸಿದರು.

Related posts

ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಇಂದಬೆಟ್ಟು ಗ್ರಾಮ ಪಂಚಾಯಿತ್ ನಿಕಟಪೂರ್ವ ಅಧ್ಯಕ್ಷ ಆನಂದ್ ಅಡಿಲು ಸ್ಪಷ್ಟನೆ

Suddi Udaya

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್‌ ಗುರುವಾಯನಕೆರೆ ಮಸೀದಿಗೆ ಭೇಟಿ

Suddi Udaya

ನಿಡ್ಲೆ: ಕುದ್ರಾಯದ ಕಿಂಡಿ ಅಣೆಕಟ್ಟಿನ ಮೇಲಿನ ಭಾಗದ ಮರಗಳ ತೆರವು

Suddi Udaya

2೦47ರಲ್ಲಿ ವಿಕಸಿತ ಭಾರತ : ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಪ್ರಧಾನ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಲಾರಿ ಮತ್ತು ಕಾರು ಡಿಕ್ಕಿ: ನಾಲ್ವರಿಗೆ ಗಾಯ

Suddi Udaya
error: Content is protected !!