April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಫೆ.18: ಬಳಂಜ ಶಾಲೆಯ 75 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಾಗಾರ

ಬಳಂಜ : ಬಳಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಶಾಲಾ ಅಮೃತಮಹೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ಬಳಂಜ ಎಜ್ಯುಕೇಷನಲ್ ಟ್ರಷ್ಟ್ (ರಿ) ಬಳಂಜ, ಹಳೇ ವಿದ್ಯಾರ್ಥಿಗಳ ಸಂಘ ಬಳಂಜ ಇದರ ವತಿಯಿಂದ ಬಳಂಜ ಶಾಲಾ 75 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಾಗಾರ ಫೆ.18ರಂದು ಶಾರದಾ ಕಲಾ ಮಂದಿರ ಬಳಂಜ ದಲ್ಲಿ ನಡೆಯಲಿದೆ.

ಉದ್ಘಾಟನೆಯನ್ನು ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೆರವೇರಿಸಲಿದ್ದಾರೆ.

ಟ್ರಸ್ಟ್ ನ ಲೋಗೋ ಅನಾವರಣ ಅಮೃತ ಮಹೋತ್ಸವ ಸಮಿತಿ ಗೌರವ ಸಲಹೆಗಾರ ಹೆಚ್.ಧರ್ಣಪ್ಪ ಪೂಜಾರಿ, ನೀಲಿನಕ್ಷೆ ಅನಾವರಣ ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿ ಲ,ಗೌರವ ಸಲಹೆಗಾರ ಕೆ ವಸಂತ ಸಾಲಿಯಾನ್ ವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿವಾಗಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಅಮೃತ ಮಹೋತ್ಸವ ಸಮಿತಿ ಬಳಂಜ ಅಧ್ಯಕ್ಷ ಪಿ. ಕೆ. ಚಂದ್ರಶೇಖರ್, ಬಳಂಜ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಶಾಲಾಭಿವೃದ್ದಿ ಸಮಿತಿ ಬಳಂಜ ಅಧ್ಯಕ್ಷ ರತ್ನಾಕರ ಪೂಜಾರಿ,ಹಳೆವಿದ್ಯಾರ್ಥಿ ಸಂಘ ಬಳಂಜ ಅದ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಉಪಸ್ಥಿತರಿರುವರು.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕ

Suddi Udaya

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ಸದಾಶಿವ ಊರ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಆಯ್ಕೆ

Suddi Udaya

ಮುಂಡಾಜೆ: ರಾಷ್ಟ್ರೀಯ ಮತದಾರರ ದಿನಾಚರಣೆ

Suddi Udaya

ಮಚ್ಚಿನ ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಡಿ.26-27: ಬಳಂಜ ಬದಿನಡೆ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya

ಗುರುವಾಯನಕೆರೆಯಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯಾರಂಭಗೊಂಡ ಶ್ರೀ ಶಾಂತೀಶ್ವರ ಫ್ಯೂಯಲ್ ನ ಉದ್ಘಾಟನೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ