24.3 C
ಪುತ್ತೂರು, ಬೆಳ್ತಂಗಡಿ
May 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಜೆಟ್ ನಲ್ಲಿ ಓಲೈಕೆಗೆ ಒತ್ತು‌ ಹಾಗೂ ಅಭಿವೃದ್ಧಿಯ ಆಶಯ ಮಸುಕಾಗಿದೆ : ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಜನಪ್ರಿಯತೆ ಹಾಗೂ ಓಲೈಕೆಗೆ ಒತ್ತು‌ನೀಡಿದೆ. ಜನಪ್ರಿಯ ಫೋಷಣೆಗಳಿವೆ, ಆದರೆ ಅವುಗಳಿಗೆ ಕೊಡಮಾಡಿದ ಅನುದಾನ ಬಹಳ ಕಡಿಮೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ.ಗ್ಯಾರಂಟಿ ಯೋಜನೆಗಳಿಗೆ ಬಹಳ ಒತ್ತು ನೀಡಲಾಗಿದೆ. ಅಭಿವೃದ್ಧಿ ಯ ಆಶಯ ಮಸುಕಾಗಿದೆ.

ಸರಕಾರದ ಬಜೆಟ್ ಹಾಗೂ ಕಾರ್ಯಕ್ರಮಗಳು ಸಾಮರ್ಥ್ಯ ವರ್ಧನೆಗೆ ಮಹತ್ವ ನೀಡಬೇಕು. ದುಃಖಕರ ಸಂಗತಿ ಎಂದರೆ ಜನಸಾಮಾನ್ಯರನ್ನು ಸ್ವಾವಲಂಬಿಗಳಾಗಿ ಮಾಡುವ ಬದಲು ಸರಕಾರದ ಕೊಡುಗೆಗಳ ಮೇಲೆ ಅವಲಂಬನೆ ಜಾಸ್ತಿ ಆಗುವಂತೆ ಮಾಡಲಾಗಿದೆ.ಇದು ಸುಸ್ಥಿರ ಅಭಿವೃದ್ಧಿ ಗೆ ಪೂರಕವಲ್ಲ.ಎಲ್ಲೋ ಅಭಿವೃದ್ಧಿ ಯ ಹೆಜ್ಜೆ ಹಿಂದೆ ಇಟ್ಟಂತೆ ಭಾಸವಾಗುತ್ತಿದೆ ಎಂದು ತಿಳಿಸಿದ್ದಾರೆ.

Related posts

ಮೇ 26: ವಿದ್ಯುತ್ ನಿಲುಗಡೆ

Suddi Udaya

ಗುರುವಾನಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪದಗ್ರಹಣ

Suddi Udaya

ನಾವೂರುನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರದ ಉದ್ಘಾಟನೆ

Suddi Udaya

ಕಕ್ಯಪದವು ನಡುಕೇರ್ಯ ತರವಾಡು ಮನೆಯಲ್ಲಿ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ , ಸನ್ಮಾನ ಕಾರ್ಯಕ್ರಮ

Suddi Udaya

ಮನಸೂರೆಗೊಂಡ ಸರ್ವಧರ್ಮಗಳಲ್ಲಿ ಹಾಗೂ ಸಂವಿಧಾನದಲ್ಲಿ ಕ್ಷಮಾಧರ್ಮ ಆನ್ಲೈನ್ ಕಾರ್ಯಕ್ರಮ

Suddi Udaya

ದಿಡುಪೆ ಪಯ್ಯೆ ನಿವಾಸಿ ಸುಲೈಮಾನ್ ಪಯ್ಯೇ ನಿಧನ

Suddi Udaya
error: Content is protected !!