25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿರಾಜ್ಯ ಸುದ್ದಿ

ಆಡಳಿತ ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ ಸತ್ವಹೀನ ಬಜೆಟ್ : ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಬಜೆಟ್ ಭಾಷಣದ ನೆಪದಲ್ಲಿ ಶಾಸನ ಸಭೆಯನ್ನು ಮುಖ್ಯಮಂತ್ರಿ ದುರುಪಯೋಗ ಪಡಿಸಿಕೊಂಡಿದ್ದಾರೆಂದು 2024-25ನೇ ಸಾಲಿನ ಮುಂಗಡ ಪತ್ರಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತೀಕ್ಷ್ಣವಾಗಿ ಪ್ರತಿಕ್ರಿಯಿದ್ದಾರೆ.


ಕಳೆದ 9 ತಿಂಗಳಲ್ಲಿ ಕರ್ನಾಟಕ ರಾಜ್ಯವನ್ನು ಆರ್ಥಿಕವಾಗಿ ಆದೋಗತಿಗೆ ತಳ್ಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಗಡ ಪತ್ರ ಮಂಡಿಸುವ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲೆಂದೇ ಸದನದ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅಂದಾಜು ಏಳು ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದ ಜನತೆಗೆ ಸಮಾನವಾಗಿ ಕೊಡುಗೆ ನೀಡಬೇಕಾಗಿದ್ದ ಸರ್ಕಾರ ಇಲ್ಲಿ ಅಲ್ಪ ಸಂಖ್ಯಾತರನ್ನು ತುಷ್ಟೀಕರಿಸಲು ಬಹುಪಾಲು ಅನುದಾನ ಅವರಿಗೆ ಮೀಸಲಿರಿಸಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಕರಾವಳಿ ಜಿಲ್ಲೆಯ ಜನತೆಗೆ ಏನೂ ಉಪಯೋಗವಾಗದ ಮುಂಗಡ ಪತ್ರವಾಗಿದ್ದು ಹಳದಿ ರೋಗದಿಂದ ಸಂಕಷ್ಟಗೊಳಗಾದ ಅಡಿಕೆ ಬೆಳೆಗಾರರಿಗೆ ಪರಿಹಾರ ನಿರೀಕ್ಷೆ ಹುಸಿಯಾಗಿದೆ. ನೀರಾವರಿ, ಶಿಕ್ಷಣ ಇಲಾಖೆಗಳನ್ನು ಕಡೆಗಣಿಸಲಾಗಿದ್ದು ಎಲ್ಲಕ್ಕಿಂತ ಮಿಗಿಲಾಗಿ ಮೂಲ ಸೌಕರ್ಯವಲಯ ಕುಂಠಿತವಾಗುವ ಲಕ್ಷಣಗಳಿವೆ. 52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಮೀಸಲಿಡುವ ಸರ್ಕಸ್‌ನಿಂದಾಗಿ ರಾಜಸ್ವ ಕೊರತೆ ವಿತ್ತೀಯ ಕೊರತೆ ಅಪಾಯ ಮಟ್ಟವನ್ನು ದಾಟಿ ರಾಜ್ಯದ ಆರ್ಥಿಕ ಸ್ಥಿತಿ ಹದೆಗೆಡುವ ಕಳವಳವನ್ನು ಪತ್ರಿಕಾ ಪ್ರಕಟಣೆ ಮೂಲಕ ಶಾಸಕ ಹರೀಶ್ ಪೂಂಜ ವ್ಯಕ್ತಪಡಿಸಿದ್ದಾರೆ.

Related posts

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಮಡಂತ್ಯಾರು ಹೈಸ್ಕೂಲ್ ರೀಯೂನಿಯನ್ ವತಿಯಿಂದ ಇತ್ತೀಚೆಗೆ ನಿಧನರಾದ ಡೇವಿಡ್ ಡಿಸೋಜಾರಿಗೆ ಶ್ರದ್ಧಾಂಜಲಿ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಸಂವಿಧಾನ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ನಡೆಸಿದ ಜಿಲ್ಲಾಮಟ್ಟದ ಸ್ಪರ್ಧ

Suddi Udaya

ನಾಪತ್ತೆಯಾದ ಬೆಳಾಲಿನ ಯುವತಿ ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರು

Suddi Udaya
error: Content is protected !!