September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ : ಮದ್ಮಲ್‌ ಕಟ್ಟೆಯಲ್ಲಿ ನಿಲ್ಲಿಸಿದ ರೂ.65 ಸಾವಿರ ಮೌಲ್ಯದ ಮೋಟಾರ್‌ ಸೈಕಲ್‌ ಕಳವು

ಕಲ್ಮಂಜ ಗ್ರಾಮದ ಮದ್ಮಲ್‌ ಕಟ್ಟೆಯಲ್ಲಿ ನಿಲ್ಲಿಸಿದ R15 ಮಾದರಿಯ ಮೋಟಾರ್‌ ಸೈಕಲ್‌ ನ್ನು ಯಾರೋ ಕಳ್ಳರು ಕಳವುಗೈದ ಪ್ರಕರಣ ಫೆ.15ರಂದು ವರದಿಯಾಗಿದೆ.

ಕೂತ್ಕುಂಜ ಗ್ರಾಮ ಸುಳ್ಯ ನಿವಾಸಿ ಅಖಿಲೇಶ್, ಎಸ್.(31) ಎಂಬವರ ದೂರಿನಂತೆ, ಫೆ.14 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಮದ್ಮಲ್‌ ಕಟ್ಟೆ ಎಂಬಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದು ನೆರೆಮನೆಯ ರಾಜಪ್ಪ ಗೌಡರ ಮನೆ ಶೆಡ್ಡಿನಲ್ಲಿ, ತನ್ನ ಬಾಬ್ತು KA-21-Y-0967 ನೇ ನೋಂದಣಿ ಸಂಖ್ಯೆಯ YAMAHA ಕಂಪನಿಯ R15 ಮಾದರಿಯ ಮೋಟಾರ್‌ ಸೈಕಲ್‌ ನಿಲ್ಲಿಸಿ ಹೋಗಿದ್ದು, ಮರುದಿನ ಫೆ.15 ರಂದು ಬೆಳಿಗ್ಗೆ ಊರಿಗೆ ವಾಪಾಸ್ಸು ಹೋಗಲು ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಕಾಣದಿದ್ದು, ಅಖಿಲೇಶ್ ರವರು ಮನೆಯ ಸುತ್ತಮುತ್ತ ವಠಾರದಲ್ಲಿ ಹುಡುಕಾಡಿ ಪತ್ತೆಯಾಗದಿದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ 65000/ -ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 09/2024 ಕಲಂ: 379 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕಡಬದ ನವ ಜೀವನ ಸದಸ್ಯರಿಂದ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Suddi Udaya

ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಾರಾವಿ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದ ಉದ್ಘಾಟನೆ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಸಾನಿಧ್ಯ ಕ್ರಿಸ್ಮಸ್ ಸಂಭ್ರಮ

Suddi Udaya
error: Content is protected !!