ತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ವೇದಮೂರ್ತಿ ನಡ್ವಂತಾಡಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ವೈದಿಕ ವಿಧಿ ವಿಧಾನಗಳು, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ ಗಣಪತಿ ಹವನ, ನವಕ ಕಲಶ, ಮಹಾ ಪೂಜೆ, ನಿತ್ಯ ಬಲಿ, ಧ್ವಜಾರೋಹಣ ಪ್ರಸಾದ ವಿತರಣೆ, ಶ್ರೀರಂಗ ಪೂಜೆ, ವಸಂತಕಟ್ಟೆ ಪೂಜೆ, ಪುಣ್ಯಾಹ, ನಿತ್ಯ ನೈಮಿತ್ತಿಕಗಳು, ಶ್ರೀ ವಿಷ್ಣುಮೂರ್ತಿ ದೇವರ ಮಹಾಪೂಜೆ ಬಲಿ, ಪ್ರಸಾದ ವಿತರಣೆ, ಶ್ರೀರಂಗ ಪೂಜೆ, ಬಲಿ, ವಸಂತ ಕಟ್ಟೆ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ, ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ, ಮೂಜಿಲ್ನಾಯ, ಕಲ್ಕುಡ-ಕಲ್ಲುರ್ಟಿಗಳಿಗೆ ಗಗ್ಗರ ಸೇವೆ ನಡೆಯಿತು.
ಮಲ್ಲಿಪಾಡಿ ಶ್ರೀ ಸದಾಶಿವ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ, ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಆಶ್ಲೇಷಾ ಬಲಿ,ಶ್ರೀರಂಗ ಪೂಜೆ, ಬಲಿ, ವಸಂತಕಟ್ಟೆ ಪೂಜೆ ಮಹಾಪೂಜೆ, ಸಂಜೆ ಬೆಂಗಳೂರು ಪ್ರಣೀತ ಮತ್ತು ಸಂಸ್ಕೃತಿ ಇವರಿಂದ ಪಿಟೀಲು ವಾದನ ನಡೆಯಿತು.
ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ವಿಶೇಷವಾಗಿ ಶ್ರೀ ಆಧಿ ಧೂಮಾವತಿ ಶ್ರೀ ದೇಯಿ ಬೈದಿತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ – ಗೆಜ್ಜೆಗಿರಿ ಇವರಿಂದ ‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗ ರಚನೆಗಾರ ನಿತಿನ್ ತೆಂಕಕಾರಂದೂರು ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರದ ಅನುವಂಶಿಕ ಆಡಳಿತದಾರ ಶ್ರೀಕೃಷ್ಣ ಸಂಪಿಗೆತ್ತಾಯ,ಹಿರಿಯರಾದ ಕೆ.ವಸಂತ ಸಾಲಿಯಾನ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಕಜೆಬೆಟ್ಟು, ಪ್ರಮುಖರಾದ ಯೋಗೀಶ್ ಕುಮಾರ್ ನಡಕ್ಕರ,ಸಂತೋಷ್ ಕುಮಾರ್ ಹೆಗ್ಡೆ ಮಾರುತಿ ನಿಲಯ, ಅನಿಲ್ ಕೊಟ್ಟಾರಿ ಮಾಳಿಗೆ ಮನೆ,ಸಂತೋಷ್ ಕುಮಾರ್ ಕಾಪಿನಡ್ಕ,ವಿದ್ಯಾನಂದ ಅಂಗಡಿಬೆಟ್ಟು ಉಪಸ್ಥಿತರಿದ್ದರು.