April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಲಾಯಿಲ: ನಾಟಿ ವೈದ್ಯ ಭೋಜ ಶೆಟ್ಟಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ನಾಟಿ ವೈದ್ಯ ಲಾಯಿಲ ಗ್ರಾಮದ ಪೆರಿಂದಿಲೆ ಭೋಜ ಶೆಟ್ಟಿ ಹೃದಯಾಘಾತದಿಂದ ಫೆ 16ರಂದು ನಿಧನರಾಗಿದ್ದಾರೆ.

ಬೋಜ ಶೆಟ್ಟಿಯವರ ತಾಯಿ ಸಂಕಮ್ಮ ಶೆಟ್ಟಿಯವರು ಪ್ರಸಿದ್ಧ ನಾಟಿ ವೈದ್ಯರಾಗಿದ್ದು ಗ್ರಾಮದಲ್ಲಿ ಹೆಸರುವಾಸಿಯಾಗಿದ್ದರು. ಹೆರಿಗೆ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಹಳ್ಳಿ ಮದ್ದು ನೀಡುತಿದ್ದರು ಅದಲ್ಲದೇ ದನ ಕರು ಸೇರಿದಂತೆ ಸಾಕು ಪ್ರಾಣಿಗಳಿಗೂ ಮದ್ದು ನೀಡುತಿದ್ದರು. ಅವರ ಮರಣ ನಂತರ ಭೋಜ ಶೆಟ್ಟಿಯವರು ತಾಯಿಯ ವೃತ್ತಿಯನ್ನು ಮುಂದುವರಿಸಿದ್ದರು. ಸಾಧು ಸ್ವಭಾವದವರಾಗಿದ್ದ ಇವರು ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುತಿದ್ದರು.

ಮೃತರು ಪತ್ನಿ ಶಾಂಭಾ , ಓರ್ವ ಪುತ್ರ ಹರಿಪ್ರಸಾದ್, ಓರ್ವ ಪುತ್ರಿ ಮೊನಿಷಾ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ- ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಸಾವ್ಯ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಅರಸಿನಮಕ್ಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಕ್ಕಡ ಹೋಬಳಿ ಘಟಕಕ್ಕೆ ಚಾಲನೆ

Suddi Udaya

ಅಳದಂಗಡಿ ಪ್ರಾ.ಕೃ.ಪ.ಸ. ಸಂಘದ ಸಿಬ್ಬಂದಿ ಪ್ರಿಯಾ ಡಿಸೋಜಾರಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಮನೆಯಲ್ಲಿ ಜಾರಿ ಬಿದ್ದು ತಲೆಗೆ ಏಟು: ಚಿಕಿತ್ಸೆ ಫಲಕಾರಿಯಾಗದೆ ಚಾರ್ಮಾಡಿ ಶಾಲಾ ಶಿಕ್ಷಕಿ ಸುಪ್ರಭಾ ಮೃತ್ಯು

Suddi Udaya

ಫೆ.9: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವ ಯುವಸಿರಿ ರೈತ ಭಾರತದ ಐಸಿರಿ ವಿಶಿಷ್ಟ ಕಾರ್ಯಕ್ರಮ; ಬೆಳಾಲು ಅನಂತೋಡಿಯಲ್ಲಿ 1000 ಕ್ಕೂ ವಿಕ್ಕಿ ಯುವ ಜನತೆಯಿಂದ ಭತ್ತ ಕಟಾವು

Suddi Udaya
error: Content is protected !!