
ಅರಸಿನಮಕ್ಕಿ : ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.17ರಂದು ಪ್ರಾರಂಭಗೊಂಡಿದ್ದು, ಸಂಜೆ ಋತ್ವಿಜರಿಗೆ ವೇದಘೋಷದೊಂದಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

ನಂತರ ಹೊರೆಕಾಣಿಕೆ ಉಗ್ರಾಣವನ್ನು ಪ್ರಗತಿಪರ ಕೃಷಿಕರಾದ ಶಿವಪ್ಪ ಶೆಟ್ಟಿಗಾರ್ ಪೊಸೋಳಿಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಅರ್ಚಕ ಉಲ್ಲಾಸ್ ಭಟ್ ಅಂತರ,ಹೊರೆಕಾಣಿಕೆ ಸಮಿತಿ ಸಂಚಾಲಕ ರಾಘವ ಗೌಡ ಮೀಯಾಳ, ಸುಂದರ್ ಶೆಟ್ಟಿಗಾರ್, ಧರ್ಣಪ್ಪ ಗೌಡ, ಸುಧೀರ್ ಕುಮಾರ್ ಎಂ. ಎಸ್., ಬಾಲಕೃಷ್ಣ ಶೆಟ್ಟಿ, ಮಂಜುಳಾ ಕಾರಂತ್, ಬ್ರಹ್ಮಕಲಶೋತ್ಸವ, ಜೀರ್ಣೋದ್ದಾರ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.












