ಅರಸಿನಮಕ್ಕಿ : ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.17ರಂದು ಪ್ರಾರಂಭಗೊಂಡಿತು.
ಫೆ.18ರಂದು ಅರಸಿನಮಕ್ಕಿಯ ಕೇಂದ್ರ ಮೈದಾನದಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ನೀಡಿರುವ ಪೂಜಾ ಪರಿಕರಗಳು, ಶ್ರೀ ದೇವರ ವಿಗ್ರಹ, ಹತ್ಯಡ್ಕ ಗ್ರಾಮಸ್ಥರಿಂದ ಹೊರೆಕಾಣಿಕೆ, ಬ್ರಹ್ಮಕಲಶೋತ್ಸವ ಅನ್ನದಾನಕ್ಕೆ ಭಕ್ತರು ನೀಡಿದ ಅಕ್ಕಿ ಸಮರ್ಪಣೆಯ ವೈಭವದ ಆಕರ್ಷಕ ಮೆರವಣಿಗೆಯು ಶ್ರೀ ಕ್ಷೇತ್ರಕ್ಕೆ ನಡೆಯಿತು.
ಹೊರಕಾಣಿಕೆ ಮೆರವಣಿಗೆಯನ್ನು ಕೊಕ್ಕಡದ ಹಿರಿಯ ವೈದ್ಯರಾದ ಡಾ. ಮೋಹನದಾಸ್ ಗೌಡ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಹುಲಿ ಕುಣಿತ, ಭಜನೆ ತಂಡಗಳು ಭಾಗವಹಿಸಿದ್ದವು. ಶ್ರೀ ಕ್ಷೇತ್ರದಲ್ಲಿ ಹೊರೆಕಾಣಿಕೆ, ಪೂಜಾ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ,ಸಂಚಾಲಕ ಬಿ. ಜಯರಾಮ್ ನೆಲ್ಲಿತ್ತಾಯ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಅರ್ಚಕ ಉಲ್ಲಾಸ್ ಭಟ್ ಅಂತರ,ಹೊರೆಕಾಣಿಕೆ ಸಮಿತಿ ಸಂಚಾಲಕ ರಾಘವ ಗೌಡ ಮೀಯಾಳ, ಧರ್ಮಸ್ಥಳ ಜಿ. ಪಂ. ಮಾಜಿ ಸದಸ್ಯ ಕೊರಗಪ್ಪ ನಾಯ್ಕ್, ವಿವಿಧ ಸಮಿತಿ ಸಂಚಾಲಕರು, ಬ್ರಹ್ಮಕಲಶೋತ್ಸವ-ಜೀರ್ಣೋದ್ದಾರ, ಆಡಳಿತ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.