26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಮಿತ್ರಾ ವ್ಹೀಲ್ ಮಾಸ್ಟರ್ ಶುಭಾರಂಭ

ಬೆಳ್ತಂಗಡಿ: ಮಡಂತ್ಯಾರು ಪೇಟೆಯ ಮುಖ್ಯ ರಸ್ತೆಯ ಕಲಾ ಸಭಾಂಗಣ ಮುಂಭಾಗದಲ್ಲಿ ಮಿತ್ರಾ ವ್ಹೀಲ್ ಮಾಸ್ಟರ್ ಶಾಪ್ ಅ.10ರಂದು ಶುಭಾರಂಭ ಗೊಂಡಿತು.

ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ. ಶ್ರೀಧರ್ ರಾವ್ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮಳಿಗೆಯನ್ನು ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ. ಹರ್ಷ ಸಂಪಿಗೆತ್ತಾಯ ಮತ್ತು ಅರ್ಚಕ ಟಿ. ವಿ. ಶ್ರೀಧರ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಫಾ.ವಂ.ಸ್ಟಾನಿ ಗೋವಿಯಾಸ್ ಮಾತನಾಡಿ ಬೆಳೆಯುತ್ತಿರುವ ಮಡಂತ್ಯಾರು ಪಟ್ಟಣಕ್ಕೆ ಇಂತಹ ಉದ್ಯಮ ಬಹಳ ಮುಖ್ಯ ಈ ಉದ್ಯಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಬೆಟ್ಟು, ಮಾತನಾಡಿ ಬೆಳೆಯುತ್ತಿರುವ ಮಡಂತ್ಯಾರಿಗೆ ಇದು ಹೊಸ ಸೇರ್ಪಡೆ. ಮಿತ್ರ ಸೇಲ್ಸ್ ಇದ್ದದು ಈಗ ಮಿತ್ರ ವೀಲ್ ಮಾಸ್ಟರ್ ಆಗಿ ಬಹಳ ದೊಡ್ಡದಾಗಿ ಈ ಉದ್ಯಮ ಬೆಳೆಯುತ್ತಿದೆ. ಆಟೋಮೊಬೈಲ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವ ಒಂದು ಕ್ಷೇತ್ರ ಎಂದು ಹೇಳಿ ಶುಭ ಹಾರೈಸಿದರು.

ಭಾಜಪಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಪಿಡಿಓ ನಾಗೇಶ್, ಉದ್ಯಮಿಗಳಾದ ಹೈದರ್ ಎಮ್ ಆರ್. ಸಂಜೀವ ಶೆಟ್ಟಿ ಮುಗೆರೋಡಿ. ಪದ್ಮನಾಭ ಸುವರ್ಣ, ಹಿರಿಯರಾದ ಮುತ್ತಣ್ಣ ಪೂಂಜ ಗರ್ಡಾಡಿ, ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೋಕ್ತೆಸರರಾದ ವಿಠಲ್ ಶೆಟ್ಟಿ ಮೂಡಯೂರು, ಉದ್ಯಮಿ ಯೋಗೀಶ್ ಕಡ್ತಿಲ, ಕಟ್ಟಡ ಮಾಲಕಿ ಅನಿತಾ ಕೊರೆಯ, ಪ್ರಮುಖರಾದ ಸದಾನಂದ ಪೂಜಾರಿ, ಮಾಲಕಿ ಶೋಭಾ ಗಂಗಾಧರ ಮಿತ್ರ, ಹೇಮಂತ್ ಶೆಟ್ಟಿ, ವರುಣ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಗೇರುಕಟ್ಟೆ ನಿವೃತ್ತ ಯೋಧ ವಿಕ್ರಮಗೆ ಅದ್ದೂರಿ ಸ್ವಾಗತ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿಯಲ್ಲಿ ಸಂಭ್ರಮದ ಓಣಂ ಹಾಗೂ ರಕ್ಷಾ ಬಂಧನ ಆಚರಣೆ

Suddi Udaya

ಬೆಳ್ತಂಗಡಿ: 51ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಉದ್ಘಾಟನೆ

Suddi Udaya

ಬಾರ್ಯ: ಆದಿಶಕ್ತಿ ಗೆಳೆಯರ ಬಳಗ ಕುಂಟಾಲಕಟ್ಟೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಓಡಿಲ್ನಾಳ ಸ.ಉ.ಪ್ರಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

Suddi Udaya
error: Content is protected !!