ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾಯನಕೆರೆ ಇದರ ವತಿಯಿಂದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ’ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಫೆ18ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ, ಬೆಳ್ತಂಗಡಿಯಲ್ಲಿ ಜರುಗಿತು.
ಉದ್ಘಾಟನೆಯನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಮುಖ್ಯ ಕಾರ್ಯನಿರ್ವಹಣಾಧಿಕಾರಿಡಾ| ಎಲ್.ಹೆಚ್. ಮಂಜುನಾಥ್ ನೇರವೇರಿಸಿದರು.
ಅಧ್ಯಕ್ಷತೆಯನ್ನು ಕುವೆಟ್ಟು ಗ್ರಾಮ ಪಂಚಾಯತ್,ಅಧ್ಯಕ್ಷರು ಶ್ರೀಮತಿ ಭಾರತಿ ಎಸ್. ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ತಾರಕೇಸರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳ್ತಂಗಡಿ, ಶ್ರೀಮತಿ ಶಾರದಾ ರೈ, ಜಿಲ್ಲಾ ಉಪಾಧ್ಯಕ್ಷರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಮತಿ ಅರ್ಚನಾ ರಾಜೇಶ್ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಧ್ಯಾ ಫ್ರೆಶ್ ಪ್ಯಾಕೇಜಿಂಗ್ ಯುನಿಟ್, ಉಜಿರೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ‘ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಭವಿಷ್ಯ ಹಾಗೂ ಪೋಷಕರ ಪಾತ್ರ’ ಎಂಬ ವಿಷಯದಲ್ಲಿ ಮನ್ಮೂಲ ವ್ಯಕ್ತಿ ಡಾ. ವಂದನಾ ಜೈನ್, ಮುಖ್ಯಸ್ಥರು, ಮನೋವಿಜ್ಞಾನ ವಿಭಾಗ, ಎಸ್.ಡಿ.ಎಂ. ಕಾಲೇಜು, ಉಜಿರೆ ಮಾಹಿತಿ ನೀಡಿದರು. ಕಾಯ೯ಕ್ರಮದಲ್ಲಿ ಸಾಧಕರಾದ ದುಗ್ಗೇ ಗೌಡ, ಪ್ರಾದೇಶಿಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಉಡುಪಿ ಪ್ರಾದೇಶಿಕ ವಿಭಾಗ ,. ಶ್ರೀಮತಿ ಪ್ರಭಾವತಿ, ಪವಿತ್ರ ಜ್ಞಾನವಿಕಾಸ ಕೇಂದ್ರ ಗುರುವಾಯನಕೆರೆ, ಶ್ರೀಮತಿ ಸರೋಜಿನಿ, ನಿಸರ್ಗ ಜ್ಞಾನವಿಕಾಸ ಕೇಂದ್ರ, ಕೊಕ್ರಾಡಿ ಸಾವ್ಯ, ಶ್ರೀಮತಿ ಯಮುನಾ ನಂದಾದೀಪ ಜ್ಞಾನವಿಕಾಸ ಕೇಂದ್ರ, ಕರಿಮಣೇಲು, ಶ್ರೀಮತಿ ವಿಜಯ, ಸತ್ಯಶ್ರೀ ಜ್ಞಾನ ವಿಕಾಸ ಕೇಂದ್ರ, ಉರುವಾಲುಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ 70 ವಷ೯ ದಾಟಿದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.
ಶ್ರೀಮತಿ ವಿಜಯ, ಸತ್ಯಶ್ರೀ ಜ್ಞಾನ ವಿಕಾಸ ಕೇಂದ್ರ ಉರುವಾಲು,ಶ್ರೀಮತಿ ಮೋನಮ್ಮ, ರಾಜರಾಜೇಶ್ವರಿ ಜ್ಞಾನವಿಕಾಸ ಕೇಂದ್ರ ನೇಜಿಕಾರು, ಶ್ರೀಮತಿ ಜಾನಕಿ, ಆರಾಧನಾ ಜ್ಞಾನ ವಿಕಾಸ ಕೇಂದ್ರ ಮೊಗ್ರು ಅನಿಸಿಕೆ ವ್ಯಕ್ತಪಡಿಸಿದರು.
ಅಚ್ಚಾಡಿ ಸೌಭಾಗ್ಯ ಜ್ಞಾನ ವಿಕಾಸ ಕೇಂದ್ರದ ಶ್ರೀಮತಿ ಗುಲಾಬಿ ಮತ್ತು ಬಳಗದವರ ಪ್ರಾಥ೯ನೆ ಬಳಿಕ ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು. ಯೋಜನಾಧಿಕಾರಿ ವಸಂತ ಕಾಯ೯ಕ್ರಮ ನಿರೂಪಿಸಿದರು.