ಜೈನ ಧರ್ಮದ ಯುಗ ಪ್ರವರ್ತಕ : ಆಚಾರ್ಯಶ್ರೀ ೧೦೮ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರು ಜಿನೈಕ್ಯ

Suddi Udaya

ಬೆಳ್ತಂಗಡಿ: ಜೈನ ಧರ್ಮದ ಯುಗ ಪ್ರವರ್ತಕ , ಚರ್ಯಾ ಶಿರೋಮಣಿ , ಆಗಮ‌ಪ್ರಣೇತ , ನಿಜವಾದ ದೇವ, ಗುರು , ಶಾಸ್ತ್ರಗಳ ಆರಾಧಕ , ಸಮಿಚೀನ ಧರ್ಮದ ಪ್ರವರ್ತಕ ಆಚಾರ್ಯಶ್ರೀ ೧೦೮ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರು ಇಂದು ಸಮಾಧಿಯಾಗಿರುತ್ತಾರೆ.

ಮಹಾಮಹಿಮ ಪೂಜ್ಯರು ಜೈನ ಸಮಾಜಕ್ಕೆ ಅದರಲ್ಲೂ ದಿಗಂಬರ ಅಮ್ನಾಯದ ಭವ್ಯ ಪರಂಪರೆಯ ದ್ಯೋತಕವಾಗಿ ಚರ್ಯೆಯನ್ನು ಆಚರಿಸುತ್ತಾ ಭಗವಾನ್ ಮಹಾವೀರರ ಶಾಸನಕ್ಕೆ ಭಕ್ತಿಯನ್ನು ಪೇರಿಸಿ ಸಕಲರಿಗೂ

ಪೂಜ್ಯರಾಗಿದ್ದರು. ಅನೇಕಾನೇಕ ಭವ್ಯ ಜಿನಮಂದಿರಗಳ ಪ್ರವರ್ಧಮಾನಕ್ಕೆ ನಿಮಿತ್ತರಾಗಿದ್ದ ಆಚಾರ್ಯಶ್ರೀಯವರು ಭವ್ಯ ಶಿಷ್ಯ ಪರಂಪರೆಯನ್ನು ದೇಶದಾದ್ಯಂತ ಪಸರಿಸಿ ಜೈನ ಧರ್ಮಕ್ಕೆ ಶಿರೋಮಣಿಯಾಗಿದ್ದರು.

ಆಚಾರ್ಯಶ್ರೀಯವರ ಜನ್ಮವು ಕರ್ನಾಟಕದ ಬೆಳಗಾವಿಯಲ್ಲಿ ಆಗಿತ್ತು. ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಆಚಾರ್ಯಶ್ರೀಯವರ ಭವ್ಯ ಚೇತನದ ಅಗಲುವಿಕೆಯಿಂದ ಜೈನ ಧರ್ಮಕ್ಕೆ ಅಪಾರ ನಷ್ಟವಾಗಿದೆ. ಆಚಾರ್ಯಶ್ರೀಯವರ ಉನ್ನತ ತತ್ವ ಆದರ್ಶಗಳು ಜಗತ್ತಿನ ಎಲ್ಲಡೆ ಪಸರಿಸಲಿ ಹಾಗೂ ಜೈನ ಧರ್ಮಕ್ಕೆ ನಿತ್ಯ ಪ್ರಭೆಯು ಅನುರಣಿಸುತ್ತಿರಲಿ ಎಂದು ಆಚಾರ್ಯಶ್ರೀಯವರ ಭವ್ಯಾತ್ಮಕ್ಕೆ ಭಕ್ತಿಪೂರ್ವಕ ನಮನಗಳನ್ನು ವಿನಯಾಂಜಲಿಯನ್ನು ಅರ್ಪಿಸುತ್ತೇನೆ

ನಿರಂಜನ್ ಜೈನ್ ಕುದ್ಯಾಡಿ

Leave a Comment

error: Content is protected !!