24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಶಾಲಾ 75 ರ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಗಾರ

ಬೆಳ್ತಂಗಡಿ: ಶಿಕ್ಷಣ ಸಂಸ್ಥೆಯೆಂಬುದು ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ.ಅದರಲ್ಲು ಸರಕಾರಿ ಶಾಲೆಯೆಂದರೆ ಊರಿನ ದೇವಾಲಯವಿದ್ದಂತೆ. ಇಲ್ಲಿ ಅನೇಕ ಬಡ ಕುಟುಂಬದ ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.75 ವರ್ಷಗಳ ಹಿಂದೆ ಈ ಭಾಗದ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಹಿರಿಯರು ಶಾಲೆ ಪ್ರಾರಂಬಿಸಿದ್ದು ಅಂತಹ ಮಹನೀಯರಿಗೆ ಗೌರವ ಸಲ್ಲಿಸಲು 75 ರ ಸಂಭ್ರಮವನ್ನು ಅತ್ಯಂತ ಅರ್ಥಪೂರ್ಣ ಆಚರಿಸಲು ಮುಂದಾಗಿದ್ದು ಅಬಿನಂದನೀಯ. ಈ ಸಂಭ್ರಮಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.

ಅವರು ಫೆ.18 ರಂದು ಸ.ಉ.ಪ್ರಾ ಹಾಗೂ ಪ್ರೌಢಶಾಲೆ ಬಳಂಜ ಇದರ 75 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಶಾರದಾ ಕಲಾ ಮಂದಿರದಲ್ಲಿ ನಡೆದ ಚಿಂತನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಬದುಕುಕಟ್ಟೋಣ ತಂಡ ಈಗಾಗಲೇ ಐದು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದು ಇದಕ್ಕೆ ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರ ನೀಡುತ್ತಿದೆ.ಬಳಂಜ ಶಾಲಾ ಅಬಿವೃದ್ದಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಬಳಂಜ ಶಾಲಾ ನೂತನ ಕಟ್ಟಡದ ನೀಲಿ ನಕಾಶೆಯನ್ನು ಅನಾವರಣ ಗೊಳಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತಭಟ್ ಮಚ್ಚಿಮಲೆ ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ನೆರವು ನೀಡಲು ಮುಂದೆ ಬರುತ್ತಿದ್ದು ಇದನ್ನು ಪಡೆದುಕೊಳ್ಳುವ ಉತ್ತಮ ಸಂಘಟನೆ ಬೇಕು.ಇದರಿಂದ ಸರಕಾರಿ ಶಾಲೆಗಳು ಬೆಳಗುತ್ತದೆ. ಇಂತಹ ಸಂಘಟನೆ ಬಳಂಜದಲ್ಲಿದ್ದು ಸಂಘಟನೆಯೊಂದಿಗೆ ಸಹಕರಿಸಿ ಬಳಂಜ ಶಾಲೆಯನ್ನು ಮಾದರಿಯಾಗಿಸಬೇಕು. ರೋಟರಿ ಸಂಸ್ಥೆ ಕೂಡ ಅಬಿವೃದ್ದಿಯಲ್ಲಿ ಕೈಜೋಡಿಸಲಿದೆ ಎಂದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಳ ಮುಖ್ಯ ಆಥಿತಿಯಾಗಿ ಮಾತನಾಡಿ ಗ್ರಾಮೀಣ ‌ಭಾಗದ ಮಕ್ಕಳಿಗೆ ಉತ್ತಮ ವಾತಾವರಣದೊಂದಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಬಳಂಜದ ಶಿಕ್ಷಣ ಪ್ರೇಮಿಗಳ ಕಲ್ಪನೆ ಅಬಿನಂದನೀಯ. ಇದಕ್ಕೆ ಪತ್ರಕರ್ತರ ಸಂಘವೂ ಜೊತೆಯಾಗಲಿದೆ ಎಂದರು.

ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ ಮಾತನಾಡಿ ಸರಕಾರಿ ಶಾಲೆಯೆಂದರೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ. ಇದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಹಳೆವಿದ್ಯಾರ್ಥಿಗಳು ಮುಂದಾಗಬೇಕು.ತಾನು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವ ಸಂಕಲ್ಪಮಾಡಬೇಕು.ಶಾಲೆಯೊಳಗಿನ‌ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ‌ ಎಂದರು.

ಅಮೃತ ಮಹೋತ್ಸವ ಸಮಿತಿಯ ಗೌರವ ಮಾರ್ಗದರ್ಶಕರಾದ ಹೆಚ್ ಧರ್ಣಪ್ಪ ಪೂಜಾರಿ ಟ್ರಸ್ಟ್ ನ ಲೋಗೊ ಅನಾವರಣ ಗೊಳಿಸಿ ಶುಭಹಾರೈಸಿದರು.

ಅಮೃತ ಮಹೋತ್ಸವದ ಸಮಿತಿ ಗೌರವ ಮಾರ್ಗದರ್ಶಕರಾದ ಕೆ ವಸಂತ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಳಂಜ ಗ್ರಾ ಪಂ ಅಧ್ಯಕ್ಷೆ ಶೋಭಾ ಕುಲಾಲ್ ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ,ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ಸಂತೋಷ್ ಪಿ ಕೋಟ್ಯಾನ್,ಸ.ಪ್ರೌ ಶಾಲಾ ಮುಖ್ಯೋಪಾದ್ಯಾಯಿನಿ ಸುಲೋಚನಾ ಕೆ, ಸ.ಪ್ರಾ.ಉ.ಹಿ ಪ್ರಾ ಶಾಲಾ ಮುಖ್ಯೋಪಾಧ್ಯಾಯಿನಿ ರೆನಿಲ್ಡಾ ಜೋಸ್ ಮಥಾಯಸ್ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಚಂದ್ರಶೇಖರ ಪಿ.ಕೆ ಸ್ವಾಗತಿಸಿದರು.ಬಳಂಜ ಶಿಕ್ಷಣ ಟ್ರಸ್ಟ್ ಅದ್ಯಕ್ಷ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು.ಬಹುಮುಖ ಪ್ರತಿಭೆ ಚಂದ್ರಹಾಸ್ ಬಳಂಜ ನಿರೂಪಿಸಿ ವಂದಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.ಸಮಿತಿ‌ ಪದಾಧಿಕಾರಿಗಳು ಸಹಕರಿಸಿದರು.

ಚಿತ್ರ ನೇಸರ ಕಟ್ಟೆ

Related posts

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಜೇಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ

Suddi Udaya

ಅರಸಿನಮಕ್ಕಿ ಶ್ರೀ ಕ್ಷೇ.ಧ.ಶೌ.ವಿ.ನಿ. ಘಟಕ ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಸಹಭಾಗಿತ್ವದಲ್ಲಿ ವನ್ಯಜೀವಿ ಕಾಳಜಿ ಅಭಿಯಾನ ಮತ್ತು ಕಾಳ್ಗಿಚ್ಚು ಮುಂಜಾಗೃತಿ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ

Suddi Udaya

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ನೇರ ನಗದು ವರ್ಗಾವಣೆ: ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಸೂಚನೆ

Suddi Udaya

ಪೋಟೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪ: ಮಹಿಳೆಯಿಂದ ಪೊಲೀಸ್ ದೂರು: ಆರೋಪಿ ಮೇಲೆ ಪ್ರಕರಣ ದಾಖಲು

Suddi Udaya
error: Content is protected !!