April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದಿಂದ ತಾಲೂಕು ಮಟ್ಟದ ಸದಸ್ಯತ್ವ ನೋಂದಾವಣೆ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ಜೈ ಕರ್ನಾಟಕ ಗಾಯಕರ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಸಮಿತಿಯಿಂದ ಬೆಳ್ತಂಗಡಿ ತಾಲೂಕು ಮಟ್ಟದ ಸದಸ್ಯತ್ವ ನೋಂದಾವಣೆ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಫೆ.19ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಬಂಗಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರವಿ ನೇತ್ರಾವತಿ ನಗರ ಸ್ವಾಗತ ಮಾಡುವ ಮೂಲಕ ಪ್ರಾರಂಭಿಸಿದರು. ಬಳಿಕ ಮಹಿಳಾ ಘಟಕ ಅಧ್ಯಕ್ಷೆ ಕವಿತಾ ದಿನಕರ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್ ಬಂಗಾಡಿ ಬಳಗದ ಬಗ್ಗೆ ಮಾಹಿತಿ ನೀಡಿದರು. ನಂತರ ಸದಸ್ಯತ್ವ ನೋಂದಾವಣೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾಗಿ ಮೋಹನ್ ಬೆಳ್ತಂಗಡಿ, ಗೌರವ ಅಧ್ಯಕ್ಷರಾಗಿ ಟೋಮಿ ಥೋಮಸ್ ತೋಟತ್ತಾಡಿ, ಮಹಿಳಾ ಘಟಕ ಅಧ್ಯಕ್ಷರಾಗಿ ಗಂಗಾ ಮದು, ಉಪಾಧ್ಯಕ್ಷರಾಗಿ ಜಯಶ್ರೀ ಮತ್ತು ಸುಮಂಗಳ, ಪ್ರದಾನ ಕಾರ್ಯದರ್ಶಿಯಾಗಿ ಗಣೇಶ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಯಾಗಿ ಕುಸುಮ ಬೈಪಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಜಗನ್ನಾಥ್ ಮುಂಡಾಜೆ ಮತ್ತು ಪ್ರಸಾದ್ ಶೆಟ್ಟಿ ಮಾದ್ಯಮ ಸಲಹೆಗಾರರಾಗಿ ರಂಜನ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರವಿ ನೇತ್ರಾವತಿ ನಗರ, ಜಿಲ್ಲಾ ಕೋಶಾಧಿಕಾರಿ ನವೀನ್ ಕುಮಾರ್ ಬಂಗಾಡಿ ಜಿಲ್ಲಾ ಮಾದ್ಯಮ ಸಲಹೆಗಾರ ಶಾಹೀನ್ ಆತ್ತಾಜೆ ಮತ್ತು ತಾಲೂಕು ಗಾಯಕರು ಉಪಸ್ಥಿತರಿದ್ದರು. ಶಾಹೀನ್ ಅತ್ತಾಜೆಯವರ ಧನ್ಯವಾದವಿತ್ತರು.

Related posts

ಮಚ್ಚಿನ: ಬಂಗೇರಕಟ್ಟೆಯಲ್ಲಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ

Suddi Udaya

ಮಡಂತ್ಯಾರು ವಲಯದ ಜನಜಾಗೃತ ಸಭೆ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾ ಸ್ವೀಕಾರ

Suddi Udaya

ಕುವೆಟ್ಟು: ಮನೆಗೆ ನುಗ್ಗಿದ್ದ ಕಳ್ಳರು: ನಗದು ಸಹಿತ ರೂ. 3.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಬೆಳ್ತಂಗಡಿ ಶ್ರೀ ರಾಘವೇಂದ್ರ ಮಠದಲ್ಲಿ ಶಿರೂರು ಮಠದ ಪೀಠಾಧಿಪತಿಗಳಿಂದ ವಿಶೇಷ ಪ್ರವಚನ

Suddi Udaya

ಮುಂಡೂರು ಶ್ರೀ ನಾಗಂಬಿಕಾ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಪೂಜಾ ಮಹೋತ್ಸವ

Suddi Udaya
error: Content is protected !!