April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗುರುವಾನಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗುರುವಾನಯನಕೆರೆ ವ್ಯಾಪ್ತಿಯ ಮಡಂತ್ಯಾರು ವಲಯದ ಬಸವನಗುಡಿ ಒಕ್ಕೂಟ ಎ ಮತ್ತು ಬಿ ಇವರ ಸಂಯುಕ್ತ ಆಶ್ರಯದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ಇವರ ನೇತ್ರತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗು ಪದಗ್ರಹಣ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಿಲಾತಬೆಟ್ಟು ಸಹಕಾರಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರು ಮಂಜಪ್ಪ ಮೂಲ್ಯ ಅತ್ತಾಜೆ , ರೂಪಗಂಗಾಧರ್ ರೂಪಶ್ರೀ ಗಾರ್ಮೆಂಟ್ಸ್ ಬಸವನಗುಡಿ, ಗುರುವಾಯನಕೆರೆ ಯೋಜನಾಧಿಕಾರಿಗಳಾದ ದಯಾನಂದ ಪೂಜಾರಿ, ಜನಜಾಗೃತೀ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ ಆಚಾರ್ಯ, ಶ್ರೀಮತಿ ಗುಣವತಿ ಬಸವನಗುಡಿ ಬಿ ಒಕ್ಕೂಟ ಅಧ್ಯಕ್ಷರು ಹಾಗು ಪಿಲಾತಬೆಟ್ಟು ಪಂಚಾಯತ್ ಸದಸ್ಯರು ಪುಷ್ಪ ಮೋಹನ್, ಮಡಂತ್ಯಾರ್ ಪಂಚಾಯತ್ ಸದಸ್ಯರು ಪಾರ್ವತಿ, ಕವಲಾಮುಡುರು ಪಂಚಾಯತ್ ಸದಸ್ಯರು ಕಲಿಲ್ ಅಹಮ್ಮದ್, ಎ ಒಕ್ಕೂಟದ ನೂತನ ಅಧ್ಯಕ್ಷರಾದ ಗೋದಾವರಿ ಹಾಗು ಬಿ ಒಕ್ಕೂಟದ ನೂತನ ಅಧ್ಯಕ್ಷ ಚಂದ್ರಶೇಖರ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯೋಜನಾಧಿಕಾರಿಗಳಾದ ದಯಾನಂದ ಪೂಜಾರಿಯವರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಪರಮ ಪೂಜ್ಯ ಖಾವಂದರಿಂದ ‘ಅಣ್ಣ ಜಾಗೃತಿ’ ಪ್ರಶಸ್ತಿ ಪುರಸ್ಕಾರ ಪಡೆದ ಮಡಂತ್ಯಾರ್ ವಲಯ ಜನಜಾಗೃತೀ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಇವರನ್ನು ಒಕ್ಕೂಟದ ವತಿಯಿಂದ ಎಲ್ಲಾ ಗಣ್ಯರ ಸಮ್ಮುಕದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ಕೇಶವತಿ ವಹಿಸಿಕೊಂಡರು, ಒಕ್ಕೂಟದ ವರದಿಯನ್ನು ಸೇವಾಪ್ರತಿನಿಧಿಯಾದ ಭಾರತೀ ಓದಿದರು, ಮಡಂತ್ಯಾರು ವಲಯ ಮೇಲ್ವಿಚಾರಕರು ಆಗಿರುವ ವಸಂತ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು, ವೆಂಕಟೇಶ್ ಧನ್ಯವಾದವಿತ್ತರು . ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

Related posts

ನ್ಯಾಯತರ್ಫು: ಅಬ್ದುಲ್ ರಹಿಮಾನ್ ರವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ

Suddi Udaya

ಬೆಳ್ತಂಗಡಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾಗಿ ಸುಮಾ ಉಜಿರೆ ಆಯ್ಕೆ

Suddi Udaya

ಕಾಶಿಪಟ್ಣ ಬಂಟರ ಗ್ರಾಮ ಸಮಿತಿಯ ಸಭೆ : ಸಮಿತಿ ರಚನೆ

Suddi Udaya

ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಟಿ. ರವಿಚಂದ್ರ ರಾವ್

Suddi Udaya

ಶಿಬಾಜೆ: ಕಟ್ಟಿಗೆ ತರಲೆಂದು ಹೋದವರು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆ

Suddi Udaya

ಬಂದಾರು: ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಣಿಯೂರು ವಲಯದ ಮೈರೋಳ್ತಡ್ಕ ಕಾರ್ಯಕ್ಷೇತ್ರದ ಸದಸ್ಯೆ ಚೆನ್ನಮ್ಮ ಖಂಡಿಗ ರಿಗೆ ಗೌರವಾರ್ಪಣೆ

Suddi Udaya
error: Content is protected !!