September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ 27- ಮಾ 2, ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ

ಬೆಳ್ತಂಗಡಿ : ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಫೆ.27 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.

ಅವರು ಫೆ.19 ರಂದು ಸುವರ್ಣ ಆರ್ಕೆಡ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಫೆ.27 ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ, ತಾಲೂಕಿನ ವಿವಿಧ ಭಜನಾ ತಂಡಗಳ ಭಜನಾ
ಮಂಗಲೋತ್ಸವ, ದೈವಾರಾಧಕರ ಮಹಾ ಸಮ್ಮೇಳನ ಪರ್ವ-2024ರ ಉದ್ಘಾಟನೆ ನಡೆಯಲಿದೆ.

ಫೆ.28 ರಂದು ದೈವಾರಾಧಕರ ವಿಚಾರ ಸಂಕೀರಣ, ಸಂಜೆ ದೈವನರ್ತಕರ ಸಮ್ಮೇಳನ, ಫೆ.29 ರಂದು ದೈವ ಪರಿಚಾರಕರ ಸಮ್ಮೇಳನ, ಮಾ.1ರಂದು ದೈವಸ್ಥಾನಗಳ ಮುಖ್ಯಸ್ಥರ ಸಮ್ಮೇಳನ, ಫೆ.2ರಂದು ಸನ್ಯಾಸಿ ಗುಳಿಗ ದೈವದ ವರ್ಷಾವಧಿ ನೆಮೋತ್ಸವ, ದೈವಾರಾಧನೆ ವಿಚಾರ ಕುರಿತು ಸ್ಪರ್ಧೆಗಳು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೈವಾರಾಧಕಾರ, ನರ್ತಕರ, ಪರಿಚಾರಕರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.

ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಕಾರ್ಯಧ್ಯಕ್ಷ ವಿಶ್ವೇಶ ಕಿಣಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಮತ್ ಮಂದಾರಗಿರಿ, ಸಲಹೆಗಾರರಾದ ಆನಂದ ಕೋಟ್ಯಾನ್, ರವಿ ಪೂಜಾರಿ ಉಪಸ್ಥಿತರಿದ್ದರು.

Related posts

ಕೋಳಿ ಅಂಕ ಅಪರಾಧವಾಗಿದ್ದು ಕಾನೂನು ಪಾಲಿಸುವಂತೆ ಪೊಲೀಸರಿಗೆ ಡೈರೆಕ್ಟರ್ ಜನರಲ್ ಆದೇಶ

Suddi Udaya

ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆದ್ರಬೆಟ್ಟು: ಮರಿಯಾoಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಲ್ಮಂಜ ಗ್ರಾಮಸಭೆ: ಪೈಪುಗಳು ಒಡೆದು 4 ದಿವಸದಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

Suddi Udaya

ನ್ಯಾಯತರ್ಪು: ಪಲ್ಲಾದೆ ಕೃಷಿಕ ನಾರಾಯಣ ಗೌಡ ನಿಧನ

Suddi Udaya

ಬೆಳ್ತಂಗಡಿ: ಜೈನ್‌ಪೇಟೆ ನಿವಾಸಿ ರಮೇಶ್ ಆಚಾರ್ಯ ನಿಧನ

Suddi Udaya
error: Content is protected !!