ಇಂದಬೆಟ್ಟು : ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ ) ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆಯನ್ನು ಫೆ.17ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಲತಾ ಅಧ್ಯಕ್ಷತೆಯಲ್ಲಿ ಇಂದಬೆಟ್ಟು ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು.
ಸಭೆಯು ಪಂಚಾಯತ್ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ಪಂ.ಕಾರ್ಯದರ್ಶಿ ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಹಾಗೂ ಹಳ್ಳಿ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನೆ ಮಾಡಿದ ಪಂಚಾಯತ್ ಅಧ್ಯಕ್ಷರು ಶುಭ ಹಾರೈಸಿದರು. ಒಕ್ಕೂಟ ವರದಿಯನ್ನು ಒಕ್ಕೂಟ ಕಾರ್ಯದರ್ಶಿಯವರು ಮಂಡಿಸಿದರು ಮತ್ತು ಜಮೆ ಮತ್ತು ಖರ್ಚುನ್ನು ಸಭೆಯಲ್ಲಿ ಎಮ್.ಬಿ.ಕೆ ವಾಣಿಶ್ರೀ ಮಂಡಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟ ವತಿಯಿಂದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ನಿತೀಶ್ ಇವರಿಗೆ ಸನ್ಮಾನಿಸಲಾಯಿತು. ನಂತರ ಇವರು ಎನ್. ಆರ್. ಎಲ್. ಎಂ. ನ ಯೋಜನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ನಂತರ ತಾಲೂಕು ವಲಯ ಮೇಲ್ವಿಚಾರಕರಾದ ಜಯನಂದ ಎನ್. ಆರ್. ಎಲ್. ಎಂ. ಯೋಜನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ನಂತರ BRP-EP ಯಾದ ವೀಣಾ ಕೃಷಿಯೇತರ ಚಟುವಟಿಕೆ ಬಗ್ಗೆ ಮಾತನಾಡಿದರು .ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ಒಕ್ಕೂಟ ಚೆನ್ನಾಗಿ ನಡೆಯುತಿದೆ, ಇನ್ನೂ ಮುಂದೆಯೂ ಒಕ್ಕೂಟ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ನಂತರ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಒಕ್ಕೂಟದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ,ಉಪಾಧ್ಯಕ್ಷರು ,ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಕೋಶಾಧಿಕಾರಿ, ಸದಸ್ಯರ ಪದಗ್ರಹಣ ಮಾಡಲಾಯಿತು. ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹೂಗುಚ್ಛ ನಡವಳಿ ಕೊಡುದರ ಮೂಲಕ ಹಸ್ತಾಂತರ ಮಾಡಲಾಯಿತು. ಹಾಗೂ ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಿಂಗತ್ವಧರಿತ ದೌರ್ಜನ್ಯ ಅಭಿಯಾನದ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲಾಯಿತು. ಸಭೆಯಲ್ಲಿ 150 ಸದಸ್ಯರು ಭಾಗಿಯಾಗಿದ್ದರು. ಪಂಚಾಯತ್ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, MBK, LCRP,ಕೃಷಿ ಸಖಿ ಹಾಗೂ ಪಶುಸಖಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕುಮಾರಿ ವೀಕ್ಷಾದೀಪ ನಿರೂಪಿಸಿದರು. ಶ್ರೀಮತಿ ಶೃತಿ ಸ್ವಾಗತಿಸಿದರು. ಶ್ರೀಮತಿ ರೋಹಿಣಿ ಧನ್ಯವಾದವಿತ್ತರು.