32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಉಜಿರೆಯಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣ; 29 ವರ್ಷದ ಬಳಿಕ ಆರೋಪಿ ದೋಷಮುಕ್ತ

ಬೆಳ್ತಂಗಡಿ: ತಾಲೂಕಿನ ಉಜಿರೆ ಎಂಬಲ್ಲಿ ದಿನಾಂಕ 27.09.1995 ರಂದು ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.

ದಿನಾಂಕ 27.09.1995 ರಂದು ಉಜಿರೆ ಗ್ರಾಮದ ನಿವಾಸಿ ಮಂಜುನಾಥ್ ಪ್ರಭು ಅವರ ಮಗ ಗಣೇಶ್ ಪ್ರಭು ಎಂಬುವವರ ಮಾಲಿಕತ್ವಕ್ಕೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ಪ್ರಕರಣ ಆರೋಪಿ ಶಂಕರ ಗೌಡ ಯಾನೇ ಶ್ರೀಧರ ಗೌಡ ಬಾಡಿಗೆ ನೆಲೆಯಲ್ಲಿ ವಾಸ್ತವ್ಯ ಹೊಂದಿದ್ದು, ಆರೋಪಿತನ ಪತ್ನಿ ಗಣೇಶ್ ಪ್ರಭುವಿನ ಮನೆಯಲ್ಲಿ ಮನೆಗೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ತದ ನಂತರ ಆಕೆಯನ್ನು ಮನೆಕೆಲಸದಿಂದ ತೆಗೆದುಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಕೆಲಸದಿಂದ ಕಿತ್ತುಹಾಕಿದ ಪೂರ್ವದ್ವೇಷದ ಕಾರಣಕ್ಕಾಗಿ ಆರೋಪಿಯು ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಈ ಸಂಬಂಧ ಶಂಕರ ಗೌಡ ಯಾನೇ ಶ್ರೀಧರ ಗೌಡ ಎಂಬವರನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣ ಕುರಿತು ದೀರ್ಘಕಾಲದ ಸಾಕ್ಷ್ಯ ವಿಚಾರಣೆಯು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದ್ದು, ಇದೀಗ ಆರೋಪಿ ಶಂಕರಗೌಡ ಯಾನೆ ಶ್ರೀಧರ ಗೌಡ ದೋಷಮುಕ್ತನಾಗಿದ್ದಾನೆ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಆರೋಪಿಯ ಪರವಾಗಿ ಜೆ.ಕೆ. ಅಸೋಸಿಯೇಟ್ಸ್ ಬೆಳ್ತಂಗಡಿ. ಇದರ ಖ್ಯಾತ ಹಿರಿಯ ವಕೀಲರಾದ ಜೆ.ಕೆ.ಪೌಲ್ ಹಾಗೂ ಸಹ ವಕೀಲರಾದ ಜಿತೇಶ್ ಕೆ, ಸಿರಾಜುದ್ದೀನ್ ಎ. ಜೋಗಿಬೆಟ್ಟು ವಾದಿಸಿದ್ದರು.

Related posts

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ – 2024

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮಕ್ಕಳಿಂದ ನಿರಂತರ ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ಎ.18 : ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

Suddi Udaya

ಬೆದ್ರಬೆಟ್ಟು ಅರ್ರಿಫಾಯ್ಯಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

Suddi Udaya

ನಿಡ್ಲೆ ಹಾಗೂ ಬೂಡುಜಾಲುವಿನಲ್ಲಿ ಸೌಜನ್ಯಪರ ಹಾಕಿದ ಬ್ಯಾನರ್ ನ್ನು ಕಿತ್ತೆಸೆದ ಕಿಡಿಗೇಡಿಗಳು

Suddi Udaya
error: Content is protected !!