38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು: ಮಲೆಬೆಟ್ಟು, ಬಜಿಲ ಒಕ್ಕೂಟದ 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ

ಕೊಯ್ಯೂರು: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮಲೆಬೆಟ್ಟು, ಆಡಳಿತ ಮಂಡಳಿ ಶ್ರೀ ವನದುರ್ಗಾ ದೇವಾಲಯ ಮಲೆಬೆಟ್ಟು, ಪ್ರಗತಿಬಂಧು , ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಮಲೆಬೆಟ್ಟು ಕೊಯ್ಯೂರು, ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇದರ ಸಹಕಾರದೊಂದಿಗೆ 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಮಲೆಬೆಟ್ಟು ಶ್ರೀ ವನದುರ್ಗ ದೇವಾಲಯದ ವನಸಿರಿ ಕಲಾಮಂದಿರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸುರೇಂದ್ರ ಯೋಜನಾಧಿಕಾರಿಯವರು ಶ್ರೀ.ಕ್ಷೇ .ಧ.ಗ್ರಾ.ಯೋ.ಬೆಳ್ತಂಗಡಿ ತಾಲೂಕು, ಧಾರ್ಮಿಕ ಉಪನ್ಯಾಸಕರಾಗಿ ಶ್ರೀಮತಿ ಉಷಾ ಕಾಮತ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪೂಜಾ ಸಮಿತಿ ಅಧ್ಯಕ್ಷ ಕರಿಯಪ್ಪ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಾಮಣಿ, ಉಪಾಧ್ಯಕ್ಷ ಹರೀಶ್ ಗೌಡ, ಅರ್ಚಕರಾದ ಅಶೋಕ್ ಭಟ್, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರವೀಂದ್ರ ನಾಥ್ ಹಾಗೂ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರುಗಳು ಹಾಗೂ ನೂತನ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಒಕ್ಕೂಟಗಳ ಪದಗ್ರಹಣವನ್ನು ತಾಲೂಕು ಯೋಜನಾಧಿಕಾರಿಯವರು ನಡೆಸಿಕೊಟ್ಟರು. ಲಾಯಿಲ ವಲಯದ ಮೇಲ್ವಿಚಾರಕ ಸುಶಾಂತ್ ಕಾರ್ಯಕ್ರಮ ನಿರೂಪಿಸಿದರು, ರವೀಂದ್ರನಾಥ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಶ್ರೀಮತಿ ಕುಸುಮಾವತಿ ವಂದಿಸಿದರು. ಹಾಗೂ ಸೇವಾಪ್ರತಿನಿಧಿಯಾದ ಶ್ರೀಮತಿ ಲೀಲಾ ವರದಿ ವಾಚಿಸಿದರು. ಕಾರ್ಯ ಕ್ರಮದಲ್ಲಿ ಪಂಚಾಯತ್ ಸದಸ್ಯರು, ಒಕ್ಕೂಟಗಳ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು.

Related posts

ಧರ್ಮಸ್ಥಳ ಶ್ರೀ ಕ್ಷೇತ್ರ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ

Suddi Udaya

ಸುಲ್ಕೇರಿಮೊಗ್ರು: ಕೇದುಕುಲೆಂಜಿ ನಿವಾಸಿ ಅಪ್ಪಿ ನಿಧನ

Suddi Udaya

ಗೇರುಕಟ್ಟೆ ಹಾ.ಉ.ಸ. ಸಂಘ ಹಾಗೂ ಬಿ.ಎಮ್.ಸಿ.ಗೆ ಕರ್ನಾಟಕ ಹಾ.ಮ. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಭೇಟಿ

Suddi Udaya

ಬಂದಾರು: ಬೊಳೋಡಿ ಸೇತುವೆ ಬಳಿ ಧರೆ ಕುಸಿತ

Suddi Udaya

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ (ನಿ.): ಅಧ್ಯಕ್ಷರಾಗಿ ರಂಜನ್ ಜಿ. ಗೌಡ, ಉಪಾಧ್ಯಕ್ಷರಾಗಿ ಶಿವಕಾಂತ ಗೌಡ

Suddi Udaya

ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಬಳಂಜ ಶಾಲೆಗೆ ರೂ.1ಲಕ್ಷ ಮೊತ್ತದ ಯೋಜನೆಗಳ ಹಸ್ತಾಂತರ

Suddi Udaya
error: Content is protected !!