25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಇತಿಹಾಸದಲ್ಲಿ ಪ್ರಥಮ ಹಬ್ಬ: ಬೆಳ್ತಂಗಡಿ ಸಂಭ್ರಮ ಸಂಪನ್ನ,

ಬೆಳ್ತಂಗಡಿ: ಸೇವೆಗಳು ಯಾವಾಗಲೂ ಮಾತನಾಡುವುದಿಲ್ಲ, ಸೇವೆಗಳ ಹಸಿವು ಇದ್ದವನಿಗೆ ಯಾವುದಾದರೊಂದು ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಾನೆ. ರಾಜಕೇಸರಿ ಸಂಘಟನೆಯ ದೀಪಕ್ ಜಿ. ಅವರು ಕೂಡಾ ಸೇವೆಯ ತುಡಿತ ಇದೆ. ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಕನಸ್ಸು ಅವರಲ್ಲಿದೆ. ಇದು ಇನ್ನೊಬ್ಬರಿಗೆ ಪ್ರೇರಣೆಯಾಗಿದೆ ಎಂದು ಲಕ್ಷ್ಮೀ ಗ್ರೂಪ್ ಆಫ್ ಇಂಡಸ್ಟ್ರಿ ಕನಸಿನ ಮನೆ ಉಜಿರೆಯ ಮೋಹನ್ ಕುಮಾರ್ ಹೇಳಿದರು. ಅವರು ಫೆ.19ರಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಇವರ ಸಹಕಾರದೊಂದಿಗೆ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಇವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಬೆಳ್ತಂಗಡಿ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವೆ ಕಾರ್ಯಮಾಡಲಾರಂಭಿಸಿದಾಗ ಜನರಿಗೆ ಅನುಮಾನಗಳು ಸಹಜ, ಸೇವೆ ಮಾಡುವವನಿಗೆ ಹಣ ಎಲ್ಲಿಂದ ಎಂಬ ಭಾವನೆಯೇ ಬರುವುದಿಲ್ಲ, ಆತನ ಸೇವೆ ಸಮಾಜಕ್ಕೆ ತಲುಪಿದಾಗ ಧನ್ಯತೆಯನ್ನು ಪಡೆಯುತ್ತಾನೆ. ನಾವು ಮಾಡುವ ಸಮಾಜ ಸೇವೆ ಇತರಿಗೆ ಪ್ರೇರಣೆಯಾಗಿ ಅವರು ಕೂಡಾ ಇದರಲ್ಲಿ ಪಾಲ್ಗೊಳ್ಳಬೇಕು. ಇಂತಹ ಸೇವೇ ಕಾರ್ಯಕ್ಕೆ ಜನರ ಪ್ರೋತ್ಸಾಹ ಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ತುಳುನಾಡು ಪಕ್ಷದ ಸ್ಥಾಪಕಾಧ್ಯಕ್ಷ ಆರ್.ಜೆ ಶೈಲೇಶ್ ಮಾತನಾಡಿ, ದೀಪಕ್ ಜಿ. ಅವರ ನೇತೃತ್ವದಲ್ಲಿ ರಾಜಕೇಸರಿ ಸಂಘಟನೆಯ ಸಮಾಜ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ಬೆಳ್ತಂಗಡಿ ನಗರ ಪಂಚಾಯತದ ಕರುಣಾಕರ ಬಂಗೇರ, ರಾಜಕೇಸರಿ ಘಟಕ ಬಸವನಬೈಲು ನೆಲ್ಲಿಗುಡ್ಡೆಯ ಸಂಚಾಲಕ ಶೇಖರ ಕುಲಾಲ್, ಕೆ.ಸಿ ಕ್ಯಾಟರರ‍್ಸ್ ಮಾಲಕ ದೇವರಾಜ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಹಬ್ಬವನ್ನು ಯಶಸ್ವಿಯಾಗಿ ಸಂಘಟಿಸಿದ ದೀಪಕ್ ಜಿ. ಇವರನ್ನು ಗೌರವಿಸಲಾಯಿತು. ದೃಷ್ಟಿ ಮಾಂಧ್ಯರಾದ ಪಕೀರ ಇವರಿಗೆ ಟ್ರಸ್ಟ್ ವತಿಯಿಂದ ಸೇವಾ ಕಾರ್ಯವಾಗಿ ಆಹಾರ ಸಾಮಾಗ್ರಿಯನ್ನು ನೀಡಲಾಯಿತು. ರಾಜಕೇಸರಿ ಟ್ರಸ್ಟ್‌ನ ಗೌರವ ಸಲಹೆಗಾರ ಪ್ರೇಮ್‌ರಾಜ್ ರೋಶನ್ ಸಿಕ್ವೇರಾ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಅಜೇಯ್ ಕಲ್ಲೇಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ “CBK CUP” ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ರಾಷ್ಟ್ರೀಯ ಸೇವಾ ಯೋಜನೆ ಗೀತೆಗಳ ಗಾಯನ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಅರಸಿನಮಕ್ಕಿ ಸ. ಪ್ರೌ. ಶಾಲೆಯಲ್ಲಿ ಸ್ವಾತಂತ್ಯೋತ್ಸವ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

Suddi Udaya

ಕನ್ಯಾಡಿ ರಾಮ ಕ್ಷೇತ್ರದಲ್ಲಿ ನವರಾತ್ರಿಯ ವಿಶೇಷ ಪೂಜೆ

Suddi Udaya

ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಮಹತ್ವ ಮತ್ತು ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!