ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸೈಯ್ಯದ್ ಮಹಮ್ಮದ್ ಉವೈಸ್ ಪ್ರಥಮ ಸ್ಥಾನ

Suddi Udaya

ನಡ: ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಪ್ರಾಯೋಜಕತ್ವದಲ್ಲಿ ಆಂಧ್ರಪ್ರದೇಶದ ಗುಂಟಕಲ್ ನಲ್ಲಿ ನಡೆದ ಸಾಹಿತ್ಯೋತ್ಸವ ಕಾರ್ಯಕ್ರಮದ ಜೂನಿಯರ್ ಉರ್ದು ಭಾಷಣ ಸ್ಪರ್ಧೆಯಲ್ಲಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ, ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಸೈಯ್ಯದ್ ಮಹಮ್ಮದ್ ಉವೈಸ್ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾನೆ.

ಇವನು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸೈಯ್ಯದ್ ಅಯ್ಯುಬ್ ಹಾಗೂ ಶ್ರೀಮತಿ ನೂರು ಶಬ ಇವರ ಪುತ್ರನಾಗಿದ್ದಾರೆ.


ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಇದರ ಬೆಳ್ತಂಗಡಿ ಲಾಯಿಲ ಘಟಕದ ವಿದ್ಯಾರ್ಥಿಯಾಗಿದ್ದು, ಬೆಳ್ತಂಗಡಿ ಸೆಕ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ, ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಫೆ.12 ರಂದು ಆಂಧ್ರಪ್ರದೇಶದ ಗುಂಟಕಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದ ಉರ್ದು ಭಾಷಣ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ ಜಮ್ಮು ಕಾಶ್ಮೀರ ಮುಂತಾದ ರಾಜ್ಯದ ವಿದ್ಯಾರ್ಥಿಗಳ ಪ್ರಬಲ ಪೈಪೋಟಿಯ ನಡುವೆಯೂ ತನ್ನ ಮಾತಿನ ವಿಶೇಷ ಕೌಶಲ್ಯದಿಂದ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತನ್ನ ಹೆತ್ತವರು, ಶಾಲೆ,ತಾಲೂಕು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

Leave a Comment

error: Content is protected !!