ಬೆಳ್ತಂಗಡಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾ,ಜ.ಪ ಅಭ್ಯರ್ಥಿಯಾಗಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್’ರವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಫೆ. 25ರಂದು ಬಂಟ್ವಾಳ ಬಂಟರ ಭವನದಲ್ಲಿ ನಡೆಯಲಿರುವ ಬೃಹತ್ ಜನಾಗ್ರಹ ಸಭೆಯ ಪೂರ್ವಭಾವಿ ಸಭೆಯು ಫೆ.19 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ಜನಾರ್ಧನರವರು ಮಾತನಾಡುತ್ತಾ ದ.ಕ ಜಿಲ್ಲೆಯಲ್ಲಿ ಹಿಂದೂ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಸತ್ಯಜಿತ್ ಸುರತ್ಕಲ್’ರವರ ಪಾತ್ರ ಮಹತ್ತರದಾಗಿದೆ, ಹಿಂದೂ ಕಾರ್ಯಕರ್ತರ ಬಲಿದಾನವಾದಾಗ ಮುಂದೆ ನಿಂತು ಅವರ ಮನೆಯ ಸಮಸ್ಯೆಗಳನ್ನು ಪರಿಹರಿಸುವ ಜಿಲ್ಲೆಯ ಏಕೈಕ ನಾಯಕ ಸತ್ಯಜಿತ್ ಸುರತ್ಕಲ್’ರವರಿಗೆ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಬಾಜಪ’ದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಮಾತನಾಡಿ ಹಿಂದೂ ಕಾರ್ಯಕರ್ತರ ಆಶಯ ಮತ್ತು ಕೋರಿಕೆಯಂತೆ ತಾನು ರಾಜಕೀಯ ಪ್ರವೇಶ ಮಾಡಲು ಸಿದ್ದನಿದ್ದೇನೆ. ಇದುವರೆಗೆ ರಾಜಕೀಯವಾಗಿ ನಾನು ಯಾವುದೇ ಸ್ಥಾನಮಾನ ಕೇಳಿದವನಲ್ಲ ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅನಿವಾರ್ಯವಾಗಿ ರಾಜಕೀಯ ಪ್ರವೇಶ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭಿಮಾನಿಗಳ ಅಭಿಲಾಷೆಯಂತೆ ಬಾಜಪ ಪಕ್ಷದಿಂದ ಅವಕಾಶ ಸಿಕ್ಕಿಲ್ಲಿ ನಾನು ಸ್ಪರ್ದಿಸಲು ಸಿದ್ದ. ಈ ನಿಟ್ಟಿನಲ್ಲಿ ಫೆ-25ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯುವ ಬೃಹತ್ ಜನಾಗ್ರಹ ಸಭೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ತಾಲೂಕಿನ ವಿವಿಧ ಕಡೆಯಿಂದ ಸತ್ಯಜಿತ್ ಸುರತ್ಕಲ್ ಅಭಿಮಾನಿಗಳು ಆಗಮಿಸಿದ್ದರು.
ವೇದಿಕೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ಮನೋಜ್ ಕುಂಜರ್ಪ ಉಪಸ್ಥಿತರಿದ್ದರು. ಸುನಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.