24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಪರ್ವ-2024′ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದಲ್ಲಿ ಸರ್ವ ದೈವಾರಾಧಕರಿಗೆ ಸನ್ಮಾನ: ಸಂಪತ್ ಬಿ ಸುವರ್ಣ

ಬೆಳ್ತಂಗಡಿ:ತಾಲೂಕಿನ ಗುರುವಾಯನಕೆರೆಯ ರತ್ನಗಿರಿ ಶ್ರೀ ಸನ್ಯಾಸಿಗುಳಿಗ ಕ್ಷೇತ್ರದಲ್ಲಿ ಫೆಬ್ರವರಿ 27, 28, 29 ಮತ್ತು ಮಾರ್ಚ್ 01, 02ರಂದು ನಡೆಯಲಿರುವ ಪುನರ್‌ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ‘ಪರ್ವ- 2024’ ಎಂಬ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಏರ್ಪಡಿಸಲಾಗಿದೆ.

ಈ ಸಂದರ್ಭದಲ್ಲಿ ತುಳುನಾಡಿನ ಸರ್ವ ದೈವ ನರ್ತಕರಿಗೆ, ದೈವಸ್ಥಾನ ಹಾಗೂ ಗರೋಡಿ ಪಾತ್ರಿಗಳಿಗೆ, ದೈವದ ಆಯುಧ, ಮೊಗಮೂರ್ತಿ ಹಿಡಿಯುವ ಪೂಜಾರಿ, ಮುಕ್ಕಾಲ್ಲಿ, ಜೀಟಿಗೆ ಹಿಡಿಯುವವರಿಗೆ, ಮಧ್ಯಸ್ಥರಿಗೆ ಮತ್ತಿತರ ಸರ್ವ ಪ್ರಕಾರದ ದೈವಾರಾಧನೆಯ ಚಾಕರಿ ಮಾಡುವವರಿಗೆ, ದೈವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರಿಗೆ, ಭಂಡಾರದ ಮನೆತನದವರಿಗೆ, ಗುತ್ತು ಬರ್ಕೆಯವರಿಗೆ ಗೌರವಾರ್ಪಣೆ ಸಲ್ಲಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪರ್ವ ಮಹಾ ಸಮ್ಮೇಳನದ ಸಂಚಾಲಕ ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.

ದೈವಾರಾಧನೆಗೆ ಸಂಬಂಧಪಟ್ಟಂತ ಸರ್ವರೂ ಪಾಲ್ಗೊಳ್ಳುವ ಈ ಮಹೋನ್ನತ ಕಾರ್ಯಕ್ರಮದಲ್ಲಿ ತಾವೆಲ್ಲರೂ ಇರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಆದ್ದರಿಂದ ‘ಪರ್ವ-2024’ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನಕ್ಕೆ ಸರ್ವ ದೈವಾರಾಧಕರು ಆಗಮಿಸಿ ನಮ್ಮ ಸನ್ಮಾನ ಸ್ವೀಕರಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ‘ಪರ್ವ 2024’ರ ಪ್ರಧಾನ ಸಂಚಾಲಕರಾದ ಸಂಪತ್ ಬಿ. ಸುವರ್ಣ (ಸಂಪರ್ಕ ಸಂಖ್ಯೆ 9663373940 ಅಥವಾ 9448188974)ರವರನ್ನು ಸಂಪರ್ಕಿಸಬಹುದು.

Related posts

ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಗೇರುಕಟ್ಟೆ: ಸ್ನೇಹ ಸಂಗಮ ಆಟೋ-ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

Suddi Udaya

ಮಡಂತ್ಯಾರು ಗಣೇಶೋತ್ಸವ ಸಮಿತಿಯ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ವಿಶ್ವದಾಖಲೆ ಖ್ಯಾತಿಯ ಡೇವಿಡ್ ಜೈಮಿ ರವರ ಮನೆಗೆ ನೆಲ್ಯಾಡಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆ ಅಧ್ಯಕ್ಷರಾಗಿ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿಯಾಗಿ ಸುರೇಶ್ ಕೌಡಂಗೆ ಆಯ್ಕೆ

Suddi Udaya
error: Content is protected !!