27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಇತಿಹಾಸದಲ್ಲಿ ಪ್ರಥಮ ಹಬ್ಬ: ಬೆಳ್ತಂಗಡಿ ಸಂಭ್ರಮ ಸಂಪನ್ನ,

ಬೆಳ್ತಂಗಡಿ: ಸೇವೆಗಳು ಯಾವಾಗಲೂ ಮಾತನಾಡುವುದಿಲ್ಲ, ಸೇವೆಗಳ ಹಸಿವು ಇದ್ದವನಿಗೆ ಯಾವುದಾದರೊಂದು ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಾನೆ. ರಾಜಕೇಸರಿ ಸಂಘಟನೆಯ ದೀಪಕ್ ಜಿ. ಅವರು ಕೂಡಾ ಸೇವೆಯ ತುಡಿತ ಇದೆ. ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಕನಸ್ಸು ಅವರಲ್ಲಿದೆ. ಇದು ಇನ್ನೊಬ್ಬರಿಗೆ ಪ್ರೇರಣೆಯಾಗಿದೆ ಎಂದು ಲಕ್ಷ್ಮೀ ಗ್ರೂಪ್ ಆಫ್ ಇಂಡಸ್ಟ್ರಿ ಕನಸಿನ ಮನೆ ಉಜಿರೆಯ ಮೋಹನ್ ಕುಮಾರ್ ಹೇಳಿದರು. ಅವರು ಫೆ.19ರಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಇವರ ಸಹಕಾರದೊಂದಿಗೆ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಇವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಬೆಳ್ತಂಗಡಿ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವೆ ಕಾರ್ಯಮಾಡಲಾರಂಭಿಸಿದಾಗ ಜನರಿಗೆ ಅನುಮಾನಗಳು ಸಹಜ, ಸೇವೆ ಮಾಡುವವನಿಗೆ ಹಣ ಎಲ್ಲಿಂದ ಎಂಬ ಭಾವನೆಯೇ ಬರುವುದಿಲ್ಲ, ಆತನ ಸೇವೆ ಸಮಾಜಕ್ಕೆ ತಲುಪಿದಾಗ ಧನ್ಯತೆಯನ್ನು ಪಡೆಯುತ್ತಾನೆ. ನಾವು ಮಾಡುವ ಸಮಾಜ ಸೇವೆ ಇತರಿಗೆ ಪ್ರೇರಣೆಯಾಗಿ ಅವರು ಕೂಡಾ ಇದರಲ್ಲಿ ಪಾಲ್ಗೊಳ್ಳಬೇಕು. ಇಂತಹ ಸೇವೇ ಕಾರ್ಯಕ್ಕೆ ಜನರ ಪ್ರೋತ್ಸಾಹ ಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ತುಳುನಾಡು ಪಕ್ಷದ ಸ್ಥಾಪಕಾಧ್ಯಕ್ಷ ಆರ್.ಜೆ ಶೈಲೇಶ್ ಮಾತನಾಡಿ, ದೀಪಕ್ ಜಿ. ಅವರ ನೇತೃತ್ವದಲ್ಲಿ ರಾಜಕೇಸರಿ ಸಂಘಟನೆಯ ಸಮಾಜ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ಬೆಳ್ತಂಗಡಿ ನಗರ ಪಂಚಾಯತದ ಕರುಣಾಕರ ಬಂಗೇರ, ರಾಜಕೇಸರಿ ಘಟಕ ಬಸವನಬೈಲು ನೆಲ್ಲಿಗುಡ್ಡೆಯ ಸಂಚಾಲಕ ಶೇಖರ ಕುಲಾಲ್, ಕೆ.ಸಿ ಕ್ಯಾಟರರ‍್ಸ್ ಮಾಲಕ ದೇವರಾಜ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಹಬ್ಬವನ್ನು ಯಶಸ್ವಿಯಾಗಿ ಸಂಘಟಿಸಿದ ದೀಪಕ್ ಜಿ. ಇವರನ್ನು ಗೌರವಿಸಲಾಯಿತು. ದೃಷ್ಟಿ ಮಾಂಧ್ಯರಾದ ಪಕೀರ ಇವರಿಗೆ ಟ್ರಸ್ಟ್ ವತಿಯಿಂದ ಸೇವಾ ಕಾರ್ಯವಾಗಿ ಆಹಾರ ಸಾಮಾಗ್ರಿಯನ್ನು ನೀಡಲಾಯಿತು. ರಾಜಕೇಸರಿ ಟ್ರಸ್ಟ್‌ನ ಗೌರವ ಸಲಹೆಗಾರ ಪ್ರೇಮ್‌ರಾಜ್ ರೋಶನ್ ಸಿಕ್ವೇರಾ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಅಜೇಯ್ ಕಲ್ಲೇಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ ಸ್ವೀಪ್ ಸಮಿತಿಯಿಂದ ತಾಲೂಕಿನ 241 ಬಿಎಲ್ ಒ ಗಳಿಗೆ ತರಬೇತಿ

Suddi Udaya

ಶಿಬಾಜೆ: ಪಡಂತ್ತಾಜೆಯಲ್ಲಿ ಒಂಟಿ ಸಲಗ ದಾಳಿ: ಬಾಳೆಗಿಡ, ಅಡಿಕೆ ಗಿಡಗಳಿಗೆ ಹಾನಿ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಿದ್ಧತೆ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬದ್ಯಾರು-ಶಿರ್ಲಾಲು ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ:

Suddi Udaya

ಬೆಳ್ತಂಗಡಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya
error: Content is protected !!