24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮರೋಡಿ ಅರುಣೋದಯ ಯುವಕ ಮಂಡಲದ 35ನೇ ವರ್ಷದ ವಾರ್ಷಿಕೋತ್ಸವ

ಮರೋಡಿ : ಅರುಣೋದಯ ಯುವಕ ಮಂಡಲ ಮರೋಡಿ ಇದರ 35ನೇ ವರ್ಷದ ವಾರ್ಷಿಕೋತ್ಸವ ಫೆ.19 ರಂದು ನಡೆಯಿತು.

ಸಭಾ ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಜಯಂತ್ ಕೋಟ್ಯಾನ್ ಹಾಗೂ ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಕರ್ ಬುಣ್ಣನ್ ಮಾತಾನಾಡಿ ಗ್ರಾಮದ ಅಭಿವೃದ್ಧಿಗೆ ಇಂಥ ಯುವಕ ಮಂಡಲಗಳ ಸಹಕಾರ ಅಗತ್ಯ ಇದೆ. ಗ್ರಾಮದ ಸರ್ವತೋಮುಖ ಕೆಲಸಗಳಲ್ಲಿ ನಿಮ್ಮನ್ನು ನೀವೂ ಅರ್ಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಅರುಣೋದಯ ಯುವಕ ಮಂಡಳದ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದರು. ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಾವರ್ಮ ಜೈನ್ ಹಾಗೂ ಇರವೈಲ್ ಪಾನಿಲ ಸತೀಶ್ಚಂದ್ರ ಸಾಲ್ಯಾನ್, ಗ್ರಾಮ ಪಂಚಾಯತ್ ಅಂಡಿಂಜೆ ಇದರ ಸದಸ್ಯ ರಂಜಿತ್ ಪಾರಿಜಾತ ಹಾಗೂ ಪಕೀರಬ್ಬ, ಮಾಸ್ಟರ್ ಫ್ಲವರ್ ಗುರುಪ್ರಸಾದ್ ನಾರಾವಿ, ಅಶೋಕ್ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭರಾಜ್ ಹೆಗ್ಡೆ, ಉಮೇಶ್ ಸಾಲ್ಯಾನ್ ಹಾಗೂ ಮರೋಡಿ ಗ್ರಾಮ ಪಂಚಾಯತ್ ನ ಸದಸ್ಯೆ ಯಶೋದಾ ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷ ನವೀನ್ ಕೋಟ್ಯಾನ್ ರವರು ಪ್ರಾಸ್ತವಿಕವಾಗಿ ಮಾತಾಡಿ ಯಶೋಧರ್ ಬಂಗೇರ ನಿರೂಪಿಸಿದರು. ಬಾಲಕೃಷ್ಣ ಬಂಗೇರ ವಂದಿಸಿದರು.

Related posts

ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿಯವರಿಗೆ ಸನ್ಮಾನ

Suddi Udaya

ಬಾಜಾರು-ಜೋಡುಕಟ್ಟೆ, ಕೊಡಿಬೆಟ್ಟು-ದೇವರಗುಡ್ಡೆ, ದೇವರಗುಡ್ಡೆ-ತೆಕ್ಕಾರು ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಕೊಯ್ಯೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ, ಏರ್ ಟೆಲ್ ಸಂಸ್ಥೆಯ ಗಮನಕ್ಕೆ ತಂದರೂ ನಿರ್ಲಕ್ಷ್ಯ ಧೋರಣೆ: ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಪರವಾಗಿ ಅಶೋಕ್ ಪೂಜಾರಿ ಬಜಿಲ ಒತ್ತಾಯ

Suddi Udaya

ಬಳಂಜ ಸ.ಹಿ.ಪ್ರಾ. ಶಾಲೆಯ ಅಭಿವೃದ್ಧಿಗೆ ರೂ. 2.00 ಕೋಟಿ ಅನುದಾನ ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜರಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಮನವಿ

Suddi Udaya

36ನೇ ಮಹಿಳಾ ವಿಭಾಗದ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ ಕರ್ನಾಟಕ ತಂಡಕ್ಕೆ ತೃತೀಯ ಸ್ಥಾನ ಎಸ್ ಡಿ ಎಂ ಕಾಲೇಜಿನ 2 ವಿದ್ಯಾರ್ಥಿನಿಯರ ಸಾಧನೆ

Suddi Udaya

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮ್ಮರ್ ಪ್ಯಾರಡೈಸ್ ಸಮಾರೋಪ ಸಮಾರಂಭ

Suddi Udaya
error: Content is protected !!