ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಸಮಾರೋಪ

ಉಜಿರೆ: ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು, ಯಶಸ್ಸು ಎಂಬುದು ಸುಲಭವಾಗಿ ದಕ್ಕುವಂತದ್ದಲ್ಲ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕು, ಇಚ್ಛಾಶಕ್ತಿ ಬೇಕು, ಜೊತೆಗೆ ಕೆಲಸವನ್ನು ಕಷ್ಟವೆನ್ನದೆ ಇಷ್ಟಪಟ್ಟು ಮಾಡಿ ಎಂದರು. ಅನೇಕ ಯುವಕ/ಯುವತಿಯರು ರುಡ್‌ಸೆಟ್ ಸಂಸ್ಥೆಯಲ್ಲಿ ಕಲಿತು ಸಾಧನೆ ಮಾಡಿದವರ ಸಾಲಿಗೆ ನೀವು ಬರಬೇಕು, ನಿಮ್ಮ ಬದುಕಿನ ಕಥೆಗಳೇ ನಾಳೆ ಸಾಧನೆಯ ಕಥೆಗಳಾಗಿ ಬದಲಾಗಬೇಕು ಎಂದು ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನ್ ರವರು ಅಭಿಪ್ರಾಯ ಪಟ್ಟರು.

ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರರವರು ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್‌ರವರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕರಾದ ಶ್ರೀಮತಿ ಅನಸೂಯ ವಂದಿಸಿದರು. 13 ದಿನಗಳ ಈ ಕಾರ್ಯಕ್ರಮದಲ್ಲಿ 31 ಅಭ್ಯರ್ಥಿಗಳು ಭಾಗವಹಿಸುವುದರ ಜೊತೆಗೆ 31 ವಿವಿಧ ಉದ್ಯಮಗಳನ್ನು ಪ್ರಾರಂಭಿಸುವ ಬಗ್ಗೆ ರೂಪು ರೇಷೆಗಳನ್ನು ತಯಾರಿಸಿದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Related posts

ಗೇರುಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.88.24 ಫಲಿತಾಂಶ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ತಾಲೂಕಿನ ಹಲವೆಡೆ ಉತ್ತಮ ಮಳೆ

Suddi Udaya

ಕಾಶಿಪಟ್ಣ ಕೇಳದಪೇಟೆ ಮಸೀದಿಗೆ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಧಾರಾಕಾರ ಮಳೆಗೆ ಕುಸಿದು ಬಿದ್ದ ಸರಳೀಕಟ್ಟೆ ಹಿ.ಪ್ರಾ. ಶಾಲೆಯ ಹಂಚು

Suddi Udaya

ಧರ್ಮಸ್ಥಳ: ಸಿಡಿಲು ಬಡಿದು ವ್ಯಕ್ತಿ ಅಸ್ವಸ್ಥ

Suddi Udaya
error: Content is protected !!