April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠೆ

ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.22 ರಂದು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪ್ರತಿಷ್ಠೆಯು ನಡೆಯಿತು.

ಬೆಳಿಗ್ಗೆ ರೆಖ್ಯ ಗ್ರಾಮಸ್ಥರಿಂದ ಹೊರಕಾಣಿಕೆ ಸಮರ್ಪಣೆ , ಗಣಪತಿ ಹೋಮ, ಶ್ರೀ ದೇವರ ಪ್ರತಿಷ್ಠೆ , ಜೀವಕಲಶಾಭಿಷೇಕ, ಅಷ್ಠಬಂಧ ಪ್ರತಿಷ್ಠೆ, ಪರಿವಾರಗಳ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ ಜರುಗಿತು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಸಂಚಾಲಕ ಬಿ. ಜಯರಾಮ್ ನೆಲ್ಲಿತ್ತಾಯ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಕೇಶವ ರಾವ್ ನೆಕ್ಕಿಲು, ಸಹಸಂಚಾಲಕಜಯಪ್ರಸಾದ್ ಶೆಟ್ಟಿಗಾರ್, ಅರ್ಚಕ ಉಲ್ಲಾಸ್ ಭಟ್ ಅಂತರ, ಹೊರೆಕಾಣಿಕೆ ಸಮಿತಿ ಸಂಚಾಲಕ ರಾಘವ ಗೌಡ ಮೀಯಾಳ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರು, ಬ್ರಹ್ಮಕಲಶೋತ್ಸವ-ಜೀರ್ಣೋದ್ದಾರ, ಆಡಳಿತ ಸಮಿತಿಗಳ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಸಂಜೆ ಭಜನಾ ಕಾರ್ಯಕ್ರಮ , ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 7.30 ಕ್ಕೆ ಮೂಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ ನಡೆಯಲಿದೆ.


Related posts

ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ ವಲಯದ ಪವಿತ್ರ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ದಿನ ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ‘ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ, ತಾಯಂದಿರ ಹಾಲುಣಿಸುವ ಕೊಠಡಿ ಲೋಕಾರ್ಪಣೆ ಹಾಗೂ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ

Suddi Udaya

ಪಡ್ಡಂದಡ್ಕ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ

Suddi Udaya

ಗರ್ಡಾಡಿ: ಹಳ್ಳಿಂಜದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ, ಅಧಿಕಾರಿಗಳ ಭೇಟಿ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya
error: Content is protected !!