25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಸಹೋದರರಿಬ್ಬರು ಒಂದೇ ದಿನ ನಿಧನ

ಮಿತ್ತಬಾಗಿಲು: ಸಹೋದರರಿಬ್ಬರು ಒಂದೇ ದಿನ ನಿಧನ ಹೊಂದಿದ ಘಟನೆ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ದಿಡುಪೆಯ ಕೆಳಗಿನಮನೆ ನಿವಾಸಿಗಳಾದ ಜಾನು ಗೌಡ(72) ಹಾಗೂ ಸಹೋದರ ಕುಶಾಲಪ್ಪ (68) ನಿಧನ ಹೊಂದಿದ ಸಹೋದರರು.

ಜಾನು ಗೌಡ ಕಳೆದ ಕೆಲ ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದು ಫೆ. 21ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು. ಇವರಿಗೆ ಪತ್ನಿ,ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.

ಸಮೀಪದಲ್ಲೇ ವಾಸಿಸುತ್ತಿದ್ದ ಇವರ ಸಹೋದರ ಕುಶಾಲಪ್ಪ ಗೌಡ (68) ಅಣ್ಣನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಮನೆಗೆ ವಾಪಸ್ ಆದ ಬಳಿಕ ಅಸೌಖ್ಯ ಉಂಟಾಗಿ ಸಂಜೆ 5ಗಂಟೆ ವೇಳೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

Related posts

ಅಳದಂಗಡಿ ಪೇಟೆಯಲ್ಲಿ ಶಾಸಕ ಹರೀಶ್ ಪೂಂಜರವರಿಂದ ಮತಯಾಚನೆ

Suddi Udaya

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಬೆಳ್ತಂಗಡಿ ಮಹಿಳಾ ಶಾಖೆಯ ಉದ್ಘಾಟನಾ ಸಮಾರಂಭ

Suddi Udaya

ಬಳಂಜ: ಪ್ರಯಾಸ್ ಕಪ್ ಆಫ್ ಗುಡ್ ಹೋಪ್ ಜಾಗೃತಿ ಕಾರ್ಯಕ್ರಮ

Suddi Udaya

ವೇಣೂರು: ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕನ ಬಂಧನ: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

Suddi Udaya

ಕುವೆಟ್ಟು: ಜಲಾಯನ ವ್ಯಾಪ್ತಿಯ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆಹಾರ ಉತ್ಪನ್ನ ತಯಾರಿಕೆ ಮತ್ತು ಸಿಹಿ ತಿಂಡಿ ತಯಾರಿ ಬಗ್ಗೆ ತರಬೇತಿ

Suddi Udaya

ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya
error: Content is protected !!