ನಾವರ:ಊರಿನ ಶ್ರದ್ದಾ ಕೇಂದ್ರಗಳ ಪುನರ್ ನಿರ್ಮಾಣದಿಂದ ಊರಿನಲ್ಲಿ ಪರಿವರ್ತನೆಯ ಬೆಳಕು ಸಂಚರಿಸಿ ಮನೆ- ಮನ ಬೆಳಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಫೆ. 23 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದರು.
ಮಾ.31 ರಿಂದ ಎ.4 ರವರೆಗೆ ನಡೆಯಲಿರುವ ನಾವರ ಬ್ರಹ್ಮಕಲಶೋತ್ಸವಕ್ಕೆ ಊರ ಭಕ್ತರು ಸಂಪೂರ್ಣ ಸಹಕಾರ ನೀಡಬೇಕು.ಅನ್ನದಾನ ಶ್ರೇಷ್ಠದಾನವಾಗಿದ್ದು ಎಲ್ಲರೂ ಅನ್ನದಾನಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ದೇವಸ್ಥಾನದ ಭಕ್ತರು ಸೇರಿದ್ದು ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕಾರ ನೀಡುವ ಭರವಸೆ ನೀಡಿದರು.ಸಭೆಯಲ್ಲಿ ದೇಗುಲದಲ್ಲಿ ಹಲವಾರು ಶಾಶ್ವತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು. ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ರೂ.10 ಲಕ್ಷ ಅನುದಾನ ಮಂಜೂರುಗೊಳಿಸುವ ಭರವಸೆಯನ್ನು ಶಾಸಕ ಹರೀಶ್ ಪೂಂಜರವರು ನೀಡಿರುತ್ತಾರೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಿತ್ಯಾನಂದ ಎನ್ ನಾವರ,ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ,ಆರ್ಚಕರಾದ ನಾರಾಯಣ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ದಯಾನಂದ, ಅಳದಂಗಡಿ ಸಿಎ ಬ್ಯಾಂಕ್ ನ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಶಿರ್ಲಾಲು ಸಿಎ ಬ್ಯಾಂಕ್ ಅಧ್ಯಕ್ಷ ನವೀನ್ ಕೆ ಸಾಮಾನಿ, ಪ್ರಮುಖರಾದ ಜಯಾನಂದ ಕೊರಲ್ಲ ಉಪಸ್ಥಿತರಿದ್ದರು.
ಆಮಂತ್ರಣ ಪರಿವಾರದ ಸಂಚಾಲಕ ವಿಜಯ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಊರವರು, ಭಕ್ತಾದಿಗಳು ಸಹಕರಿಸಿದರು.