30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ನ್ಯಾಯತರ್ಪು: ಜಾರಿಗೆಬೈಲು ಮಸೀದಿ ಬಳಿ ತಂಡಗಳ ನಡುವೆ ಹಲ್ಲೆ: ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಮಸೀದಿ ಬಳಿ ಫೇ.23ರಂದು ಮಧ್ಯಾಹ್ನ ತಂಡಗಳ ಮಧ್ಯೆ ಹಲ್ಲೆ-ಪ್ರತಿ ಹಲ್ಲೆ ನಡೆದ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾದ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಠಾಣೆಗೆ ದೂರು ನೀಡಿದ ಕಳಿಯ ಗ್ರಾಮದ ನಿವಾಸಿ ಮಹಮ್ಮದ್ ರಮೀಜ್ (32) ಅವರು, ಶುಕ್ರವಾರ (ಫೆ 23) ಮಧ್ಯಾಹ್ನ ನ್ಯಾಯಾತರ್ಪು ಗ್ರಾಮದ ಜಾರಿಗೆಬೈಲು ಮಸೀದಿ ಬಳಿಯಿದ್ದಾಗ ಪರಿಚಯದ ಆರೋಪಿ ಶಾಕೀರ್ ಎಂಬಾತ ಬಂದು ಹಲ್ಲೆ ನಡೆಸಿದ್ದು, ಆತನೊಂದಿಗೆ ಇದ್ದ ಇತರ ಆರೋಪಿಗಳಾದ ಜಾಬೀ‌ರ್, ಸಜ್ವಾನ್, ಸಿದ್ದಿಕ್, ನಾಸೀರ್, ರವೂಫ್ ಎಂಬವರುಗಳು ಕೂಡಾ ಹಲ್ಲೆ ನಡೆಸಿ ಅಲ್ಲಿಂದ ತೆರಳಿರುತ್ತಾರೆ. ನಂತರ ಭಾವನೊಂದಿಗೆ ಮನೆಗೆ ತೆರಳಿದಾಗ, ಅಲ್ಲಿಗೆ ಬಂದ ಆರೋಪಿಗಳು ಮನೆಗೆ ಬಂದು, ನನಗೆ ಹಾಗೂ ನನ್ನ ಪತ್ನಿಗೆ ಹಲ್ಲೆ ನಡೆಸಿರುತ್ತಾರೆ ಅಲ್ಲದೆ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಮನೆಯಲ್ಲಿದ್ದ ಕುರ್ಚಿಗಳಿಗೆ ಹಾನಿ ಮಾಡಿ ತೆರಳಿರುತ್ತಾರೆ. ಹಲ್ಲೆಯ ವೇಳೆ ಕಿಸೆಯಲ್ಲಿದ್ದ 12,600/- ರೂ. ಕಳವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2024 143, 147, 148, 323, 324, 504, 448, 354, 379 / 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

Related posts

ಕಲ್ಮಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೇರ ಸಂದರ್ಶನ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಪುತ್ತೂರು ಶಾಸಕ ಅಶೋಕ್ ರೈ ಗೆ ಆಮಂತ್ರಣ

Suddi Udaya

ಖ್ಯಾತ ಚಲನಚಿತ್ರ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನಕ್ಕೆ ಡಾ| ಡಿ. ಹೆಗ್ಗಡೆಯವರಿಂದ ಸಂತಾಪ

Suddi Udaya

ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ತೆರಿಗೆಯ ಹೆಸರಿನಲ್ಲಿ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ: ಪ್ರತಾಪಸಿಂಹ ನಾಯಕ್

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ

Suddi Udaya
error: Content is protected !!