ಸೌತಡ್ಕ : ಸೇವಾಭಾರತಿ ಸಂಸ್ಥೆಗೆ ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ನಿಂದ ಕೇಂದ್ರಕ್ಕೆ ಉಪಕರಣಗಳ ಹಸ್ತಾಂತರ ಕಾರ್ಯಕ್ರಮವು ಫೆ. 23 ರಂದು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಜರುಗಿತು.
ಸೇವಾಧಾಮದ ಸಂಸ್ಥಾಪಕರಾದ ಕೆ ವಿನಾಯಕ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ನ ಸಿ ಇ ಒ ರಾಜೇಶ್ ಫಡ್ಕೆ ಉದ್ಘಾಟಿಸಿ, ಸಂಸ್ಥೆಯು ನಡೆಸುತ್ತಿರುವ ಕಾರ್ಯದ ಬಗ್ಗೆ ಪ್ರಶಂಸಿಸಿ ಉದ್ಘಾಟಕರ ನುಡಿಗಳನ್ನಾಡಿದರು. ನಂತರ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ನ ಸಿ ಎಸ್ ಆರ್ ಯೋಜನೆಯಡಿ ನೀಡಿದಂತಹ ಉಪಕರಣಗಳನ್ನು ಸಾಂಕೇತಿಕವಾಗಿ ಸೇವಾಭಾರತಿ ಸಂಸ್ಥೆಗೆ ಹಸ್ತಾಂತರಿಸಿದರು.
ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ನ ಸಿ ಎಸ್ ಆರ್ ತಂಡದ ಸದಸ್ಯ ಗಣೇಶ್ ರಾಜ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ ಕೃಷ್ಣ ಭಟ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸತತವಾಗಿ 4 ವರ್ಷಗಳಿಂದ ಸೇವಾಭಾರತಿ ಸಂಸ್ಥೆಗೆ ಬೆಂಬಲ ನೀಡುತ್ತಿರುವ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತಮ್ಮ 2023-24 ರ ಸಿ ಎಸ್ ಆರ್ ಯೋಜನೆಯಡಿ ಸಂಸ್ಥೆಗೆ ರಾಜ್ಯ ಮಟ್ಟದ ರಿಹ್ಯಾಬ್ ಮೇಳದಲ್ಲಿ ವೈದ್ಯಕೀಯ ತಪಾಸಣೆಗಾಗಿ, ಸೇವಾನಿಕೇತನ ಕಚೇರಿಗೆ ಸ್ಪೀಕರ್, ಲ್ಯಾಪ್ ಟಾಪ್, ಕೇಂದ್ರಕ್ಕೆ ಫಿಸಿಯೋ ತೆರಪಿ ಸಲಕರಣೆಗಳಾದ ಶೋಲ್ಡರ್ ವೀಲ್ಸ್, ಸ್ಟ್ಯಾಂಡಿಂಗ್ ವೀಲ್ ಚೇರ್, ಸ್ಟಿಮುಲೇಷನ್ ಮಷೀನ್, ಬಿ ಪಿ ಮಾನ್ಯುವಲ್, ಸ್ಕೆತಾಸ್ಕೊಪ್, ಒಕ್ಸೋ ಮೀಟರ್, ಹಾಗೂ ದಿವ್ಯಾಂಗರಿಗೆ ಶೌಚಾಲಯ ಹಾಗೂ ರಾಂಪ್ ನಿರ್ಮಾಣಕ್ಕೆ ನೀಡಿದ್ದಾರೆ. ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ನ ರಾಜೇಶ್ ಫಡ್ಕೆ ಹಾಗೂ ಗಣೇಶ್ ರಾಜ್ ಅವರಿಗೆ ಸಂಸ್ಥೆಯ ಪರವಾಗಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಕಾರ್ಯಕ್ರಮ ಸಂಯೋಜಕ ಆಶ್ರಿತ್ ಸಿ ಪಿ ನಿರೂಪಿಸಿದರು. ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಸ್ವಾಗತಿಸಿ, ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ ಧನ್ಯವಾದವಿತ್ತರು.