ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.23 ರಂದು ವೈದಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಸಭೆಯು ನಡೆಯಿತು.
ಬೆಳಿಗ್ಗೆ ಕಳೆಂಜ-ಕಾರ್ಯತ್ತಡ್ಕ ಗ್ರಾಮಸ್ಥರಿಂದ ಹೊರಕಾಣಿಕೆ, ಹಾಗೂ ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪರಪ್ಪು, ಶ್ರೀ ಭುವನೇಶ್ವರಿ ಮಕ್ಕಳ ಭಜನಾ ತಂಡ ಬೂಡುದಮಕ್ಕಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ದುರ್ಗಾ ಪೂಜೆ, ಮಂಟಪ ಸಂಸ್ಕಾರ, ಮಂಡಲ ರಚನೆ, ಕ್ಷೇತ್ರ ಪಾಲಾಧಿವಾಸ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಎಕ್ಸಲೆಂಟ್ ಪ.ಪೂ. ಕಾಲೇಜಿನ ಸಂಸ್ಕೃತಿ ಚಿಂತಕರು, ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಧರ್ಮ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಕಳೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ ದಯಾಕರ್, ದ.ಕ ಜಿಲ್ಲಾ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ಪುತ್ತೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಸಂಚಾಲಕ ಜಯರಾಮ ನೆಲ್ಲಿತ್ತಾಯ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಅರ್ಚಕ ಉಲ್ಲಾಸ್ ಭಟ್ ಅಂತರ, ಬ್ರಹ್ಮಕಲಶೋತ್ಸವ ಸಮಿತಿ ಸಹಸಂಚಾಲಕ ಜಯಪ್ರಸಾದ್ ಶೆಟ್ಟಿಗಾರ್, ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್, ಆಹಾರ ಸಮಿತಿ ಸಂಚಾಲಕ ಹರೀಶ್ ಅಭ್ಯಂಕರ್, ಚಪ್ಪರ ಸಮಿತಿ ಸಂಚಾಲಕ ವಿಠಲ ಹಡಪ, ಹೊರಕಾಣಿಕೆ ಸಮಿತಿ ಸಂಚಾಲಕ ರಾಘವ ಗೌಡ ಮೀಯಾಳ, ಪುಷ್ಪಾಲಂಕಾರ ಸಮಿತಿ ಸಂಚಾಲಕ ಪ್ರೇಮಚಂದ್ರ, ನಗರಲಂಕಾರ ಸಮಿತಿ ಸಂಚಾಲಕ ಲೋಕೇಶ್, ಪಾರ್ಕಿಂಗ್ ಸಮಿತಿ ಸಂಚಾಲಕ ಮುತ್ತಪ್ಪ, ಉಗ್ರಾಣ ಸಮಿತಿ ಸಂಚಾಲಕ ಸಂಜೀವ ಶೆಟ್ಟಿಗಾರ್, ಭಜನಾ ಸಮಿತಿ ಸಂಚಾಲಕಿ ಶ್ರೀಮತಿ ಕವಿತಾ, ಸಭೆ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕಿ ಅನುರಾಧ ಕೇಶವ ರಾವ್, ಸ್ವಚ್ಛತಾ ಸಂಚಾಲಕ ಪ್ರಸನ್ನ ನಾಯಕ್, ಹೇಮಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ದುಡಿದ ಹಿರಿಯ ಮಾತೆಯರಾದ ಶ್ರೀಮತಿ ಸುಶೀಲಾ ಅದ್ದೆಲ, ವಾರಿಜ ಪಾಳೆಂಜ, ಪದ್ಮಾವತಿ ಉದನೆಮಜಲು, ಅಕ್ಕು ಅಚಾರ್ಯ ನಾವಳೆ, ಅಪ್ಪಿ ಬರ್ದಳ ಇವರುಗಳನ್ನು ಗೌರವಿಸಲಾಯಿತು.
ಕಾವ್ಯ ಸುಂದರ್ ಆಚಾರ್ಯ ಪ್ರಾರ್ಥಿಸಿ, ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕ ವೃಷಾಂಕ್ ಖಾಡಿಲ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಹಸಂಚಾಲಕ ಉದಯಶಂಕರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯಾಲಯ ಸಮಿತಿ ಸಹಸಂಚಾಲಕ ಕಿಶೋರ್ ಶೆಟ್ಟಿ ನಾವಳೆ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಆರ್.ಎಸ್. ಮೆಲೋಡೀಸ್ ಮಂಗಳೂರು, ಶ್ರೀಮತಿ ವಿದುಷಿ ರೂಪಶ್ರೀ ಶ್ರವಣ್ ಮತ್ತು ಶ್ರವಣ್ ಕುಮಾರ್ ಕೊಳಂಬೆ ಬಳಗದವರಿಂದ ಭಕ್ತಿ ರಸಮಂಜರಿ ನಡೆಯಿತು.