ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ

ಉಜಿರೆ : ಭಾರತ ಚುನಾವಣಾ ಆಯೋಗ , ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.24 ರಂದು ಎಸ್.ಡಿ.ಎಂ (MSW) ಪಿಜಿ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾ ಸಂಪನ್ಮೂಲ ವ್ಯಕ್ತಿ(DLMT) ಯೋಗೇಶ ಹೆಚ್.ಆರ್, ಯುವ ಮತದಾರರಿಗೆ ಪ್ರತೀ ಬಾರಿ ಚುನಾವಣೆಯಲ್ಲಿ ಮರೆಯದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಯಜಮಾನರಾಗಿ ಎಂದು ಕರೆಕೊಟ್ಟರು. ಭವಿಷ್ಯದ ಮತದಾರರು ಹಾಗೂ ಯುವ ಮತದಾರರು VHA App ಡೌನ್ಲೋಡ್ ಮಾಡಿಕೊಂಡು ಅಥವಾ ceokarnataka.gov.in ವೆಬ್ಸೈಟ್ನಲ್ಲಿ ಲಾಗಿನ್ ಆಗಿ
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರಿರುವುದನ್ನು ಖಚಿತಪಡಿಸಿಕೊಂಡು ಯಾವುದೇ ಆಮಿಷಗಳಿಗೆ ಬಲಿಯಾಗದೆ ಈ ಬಾರಿಯ ಮತದಾನದಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಚುನಾವಣಾ ಪರ್ವ ಭಾರತದ ಗರ್ವ ಎಂಬ ಘೋಷ ವಾಕ್ಯವನ್ನು ಸಾಬೀತು ಪಡಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ತೇಜಾಕ್ಷಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಡಿ.ಎಮ್ ಕಾಲೇಜಿನ ಡೀನ್ ಆದ ಡಾ.ವಿಶ್ವನಾಥ್ , ಹೆಚ್.ಒಡಿ ಡಾ.ರವಿಶಂಕರ್, ಸ್ವೀಪ್ ಸಮಿತಿ ಸದಸ್ಯರಾದ ಡೊಂಬಯ್ಯ ಇಡ್ಕಿದು, ನೆಹರು ಕೇಂದ್ರ ಮಂಗಳೂರು ಇದರ ತಾ.ಸಂಯೋಜಕರಾದ , ಶಾಂತಪ್ಪ ಕರಪತ್ರ ಬಿಡುಗಡೆ ಮಾಡಿದರು. ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ (TLMT) ಶುಭಾ ಕೆ, ಹಾಗೂ ದಿವ್ಯಾ ಕುಮಾರಿ ಯುವ ಮತದಾರರ ಅಭಿಪ್ರಾಯ ಆಲಿಸಿ, ತಪ್ಪದೇ ಮತದಾನದಲ್ಲಿ ಭಾಗವಹಿಸುವ ಜೊತೆಗೆ ಇತರರನ್ನು ಮತದಾನದಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ರಾಯಭಾರಿಗಳಾಗಿ ಕೆಲಸ ಮಾಡುವಂತೆ ತಿಳಿಸಿದರು.

Related posts

ಬಳಂಜ: ರಾಜ್ಯ ಮಡಿವಾಳರ ಸಂಘದ ವತಿಯಿಂದ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

Suddi Udaya

ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಿಶೇಷ ವರದಿಗಾರ ಶ್ರೀನಿವಾಸ ಎಂ ಸಿದ್ದಪಡಿಸಿದ ಸಂಶೋಧನಾ ವರದಿ ಬಿಡುಗಡೆ

Suddi Udaya

ಕಡಿರುದ್ಯಾವರ ಕಾನರ್ಪ ಪೆಲತ್ತಡಿ ನಿವಾಸಿ ನೀಲಯ್ಯ ಗೌಡ ನಿಧನ

Suddi Udaya

ಹೊಕ್ಕಾಡಿಗೋಳಿ ಕುಲಾಲ ಯಾನೆ ಕುಂಬಾರರ ಸಮಾಜ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಬಡ ಕುಟುಂಬದ ಮನೆಯ ಮೇಲ್ಚಾವಣಿ ದುರಸ್ತಿ

Suddi Udaya

ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿಯ ರಾಜ್ಯ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಸುಕುಮಾರ್ ರವರಿಗೆ ಅಭಿನಂದನೆ: ವಗಾ೯ವಣೆಗೊಂಡ ಉಪನ್ಯಾಸಕ ಗಣಪತಿ ಭಟ್ ರವರಿಗೆ ಬೀಳ್ಕೊಡುಗೆ

Suddi Udaya

ಪುದುವೆಟ್ಟು ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya
error: Content is protected !!