ಉಜಿರೆ : ಮಂಗಳೂರು ಶ್ರೀ ಧ.ಮ. ಕಾನೂನು ಕಾಲೇಜು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವು ಫೆ. 23,24 ಹಾಗೂ 25ರಂದು ಆಯೋಜಿಸಿದ್ದ 32ನೇ ವರ್ಷದ ಯಕ್ಷೋತ್ಸವ -2024 ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜು ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ.
ಸಮಗ್ರ ವೈಯಕ್ತಿಕದಲ್ಲಿ ಜಿ ಸುಬ್ರಹ್ಮಣ್ಯ ದ್ವಿತೀಯ ಸ್ಥಾನ, ವೈಯಕ್ತಿಕ ತಂಡ ಶ್ರೇಷ್ಠ ಹಾಗೂ ಸ್ತ್ರೀ ವೇಷದಲ್ಲಿ ಸಾಕ್ಷಿ ಎಂ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಭಾಗವತರಾಗಿ ಸಿಂಚನಾ ಮೂಡುಕೊಡಿ, ಚೆಂಡೆಯಲ್ಲಿ ಆನಂದ ಗುಡಿಗಾರ್, ಮದ್ದಳೆಯಲ್ಲಿ ಆದಿತ್ಯ ಹೊಳ್ಳ ಹಾಗೂ ಮುಮ್ಮೇಳದಲ್ಲಿ ಸೌರವ್ ಶೆಟ್ಟಿ, ವರ್ಷಿತ್ ಎಂ ಡಿ, ಮಿತುನ್ ರಾಜ್, ಜಿ ವಿ ವಿಜೇತ್, ಕೀರ್ತನ್ ಯು, ಹಾರ್ದಿಕ್, ಜಿ ಸುಬ್ರಹ್ಮಣ್ಯ, ದೀಪಶ್ರೀ ಹೊಳ್ಳ, ಸಾಕ್ಷಿ ಎಂ ಕೆ ಭಾಗವಹಿಸಿದ್ದರು.
ಅರುಣ್ ಕುಮಾರ್ ಧರ್ಮಸ್ಥಳ ಈ ತಂಡಕ್ಕೆ ನಿರ್ದೇಶನವನ್ನು ನೀಡಿರುತ್ತಾರೆ. ಕು. ಮುಕ್ತಿಶ್ರೀ ಹಾಗೂ ಕು.ಶ್ರುತಿ ದೇವಾಡಿಗ ರಂಗ ಸಹಾಯಕರಾಗಿ ಸಹಕರಿಸಿದರು.