22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಶ್ರೀ ಗುರುಪೂಜೆ: ಮಾತೃ ಸಂಘದಿಂದ ಮಂಜೂರಾದ 2 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆ

ಸುಲ್ಕೇರಿ : ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿ ಬ್ರಹ್ಮಗಿರಿ ,ಸುಲ್ಕೇರಿ ಇಲ್ಲಿ ಪ್ರಥಮ ವರ್ಷದ ಗುರುಪೂಜೆ ,ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯು ಸುಲ್ಕೇರಿ ಗ್ರಾಮದ ಬ್ರಹ್ಮಗಿರಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಬೆಳ್ತಂಗಡಿ ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತೃ ಸಂಘದಿಂದ ಮಂಜೂರಾದ 2 ಅಶಕ್ತ ಕುಟುಂಬಗಳಿಗೆ ರೂ.5000/- ದಂತೆ ಒಟ್ಟು ರೂ.10000/ ಮೊತ್ತದ ಸಹಾಯಧನ ವಿತರಿಸಿದರು.

ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಉಲ್ಲೇಖಿಸುತ್ತಾ ಇಂದಿನ ಯುವಪೀಳಿಗೆ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕೈಜೋಡಿಸಬೇಕೆಂದು ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ.ಕೆ ಪ್ರಸಾದ್ ರವರು ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲ್ಕೇರಿಯ ಬಿಲ್ಲವ ಸಂಘದ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ ವಹಿಸಿದ್ದರು. ಗ್ರಾಮದ ಗುತ್ತು ಬರ್ಕೆ ಮತ್ತು ಬೇರೆ ಬೇರೆ ಸಂಘ ಸಂಸ್ಥೆಯ ಮುಖ್ಯಸ್ಥರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ವಲಯದ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಿರಿಜಾ, ಸುಲ್ಕೇರಿ ಬಿಲ್ಲವ ಸಂಘದ ಗೌರವ ಅಧ್ಯಕ್ಷರಾದ ಸುಧೀರ್ ಎಸ್.ಪಿ , ಸುಲ್ಕೇರಿಯ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಭಂಡಾರಿಗೋಳಿ, ಸುಲ್ಕೇರಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ನಾರಾಯಣ ಪೂಜಾರಿ, ತಾಲೂಕು ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮತಿ ಪ್ರಮೋದ್ , ಕುದ್ಯಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ಪಿಲ್ಯಾ ಗ್ರಾಮ ಸಮಿತಿ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ, ಸುಲ್ಕೇರಿ ಮೊಗ್ರು ಗ್ರಾಮ ಸಮಿತಿಯ ಅಧ್ಯಕ್ಷರಾದ ಸಂಕೇತ್ ಪೂಜಾರಿ, ನಾವರ ಗ್ರಾಮ ಸಮಿತಿ ಅಧ್ಯಕ್ಷರಾದ ನವೀನ್ ಪೂಜಾರಿ, ಕುತ್ಲೂರು ಗ್ರಾಮ ಸಮಿತಿಯ ಅಧ್ಯಕ್ಷ ರೋಹನ ಪೂಜಾರಿ, ಸುಲ್ಕೇರಿ ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಶಂಕರ ಪೂಜಾರಿ, ಯಶೋಧರ ಪೂಜಾರಿ, ಕೆ.ಬಿ ಪ್ರದೀಪ್, ಹರೀಶ್ ಪೂಜಾರಿ, ವಸಂತ ಪೂಜಾರಿ, ಸುಜಯ್ ಕೆ.ಹೆಚ್ ಕೋಟ್ಯಾನ್, ರಮೇಶ್ ಪೂಜಾರಿ, ಕೀರ್ತನ್ ಪೂಜಾರಿ
ಸುನಿಲ್ ಪೂಜಾರಿ, ಪ್ರವೀಣ್ ಪೂಜಾರಿ, ಗುರುರಾಜ್ ಪೂಜಾರಿ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಸಂತಿರವರು ವರದಿ ವಾಚಿಸಿದರು, ಕಾರ್ಯದರ್ಶಿ ಡೀಕಯ್ಯ ಪೂಜಾರಿ ಸ್ವಾಗತಿಸಿದರು, ಶ್ವೇತಾ ನಾರಾಯಣ ಪೂಜಾರಿ ಧನ್ಯವಾದವಿತ್ತರು.

Related posts

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ತಾಲೂಕಿನಲ್ಲಿ ಗುಡುಗು ಸಹಿತ ಗಾಳಿ ಮಳೆ ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

Suddi Udaya

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ

Suddi Udaya

ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಕ ವಿಜ್ಞಾನ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ

Suddi Udaya

ನಾಲ್ಕೂರು: ಪಾಲೆದಡಿ ಸಂಕಪ್ಪ ಪೂಜಾರಿ ನಿಧನ

Suddi Udaya
error: Content is protected !!