37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಫೆ.29-ಮಾ.2ರವರೆಗೆ ನಡೆಯಲಿರುವ ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಮ್ಮೇಳನಕ್ಕೆ ಕೊಕ್ಕಡದ ಸಿಬಂತಿ ಪದ್ಮನಾಭ

ಬೆಳ್ತಂಗಡಿ: ಮಲೇಷ್ಯಾದ ಕೌಲಾಲಂಪುರದಲ್ಲಿ ಫೆ.29ರಿಂದ ಮಾರ್ಚ್‌ 2ರವರೆಗೆ ನಡೆಯಲಿರುವ ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಮ್ಮೇಳನದಲ್ಲಿ ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಕೆ.ವಿ. ಸಿಬಂತಿ ಪದ್ಮನಾಭ ಭಾಗವಹಿಸಲಿದ್ದಾರೆ.

‘ಆಗ್ನೆಯ ಏಷ್ಯಾ ರಾಷ್ಟ್ರಗಳಲ್ಲಿ ಮಾಧ್ಯಮ, ಸುಸ್ಥಿರತೆ, ಅಭಿವೃದ್ಧಿ ಮತ್ತು ಪ್ರಭುತ್ವದ ಚರ್ಚೆಗಳು’ ಎಂಬ ವಿಷಯದ ಮೇಲೆ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಂಘಟನೆ ಹಾಗೂ ಸನ್‌ವೇ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸುತ್ತಿವೆ.ಸಮ್ಮೇಳನದಲ್ಲಿ ಪದ್ಮನಾಭ ಅವರು ‘ಮಹಿಳಾ ಸಬಲೀಕರಣದ ವೇದಿಕೆಯಾಗಿ ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನದ ಒಂದು ಅಧ್ಯಯನ’ ಕುರಿತು ಸಂಶೋಧನ ಪ್ರಬಂಧ ಮಂಡಿಸಲಿದ್ದಾರೆ.


ಸಿಬಂತಿ ಪದ್ಮನಾಭರವರು ಮೂಲತಃ ಕೊಕ್ಕಡ ಗ್ರಾಮದ ಸಿಬಂತಿಯವರಾಗಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ. ಶಾಲೆ ಮುಂಡೂರುಪಳಿಕೆ ಹಾಗೂ ಪಟ್ಟೂರಿನ ಶ್ರೀ ವಿಷ್ಣುಮೂರ್ತಿ ಅ.ಹಿ.ಪ್ರಾ.ಶಾಲೆಯಲ್ಲಿ ಪಡೆದಿರುತ್ತಾರೆ.

Related posts

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದು ಮಾದರಿಯಾದ ಸುಪ್ರಾಶ್ವರಾಜ್ ಜೈನ್ ಶಿರ್ಲಾಲು

Suddi Udaya

ಶಾಸಕ ಹರೀಶ್ ಪೂಂಜರಿಗೆ ಅಂಗರಕ್ಷಕ ನಿಯೋಜನೆ

Suddi Udaya

ಆ. 9 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ

Suddi Udaya

ಗಂಡಿಬಾಗಿಲು ಧರ್ಮೋಪದೇಶ ಶಾಲೆಯ ಮುಖ್ಯೋಪಾಧ್ಯಾಯ ಶಿಜು ಸಿ.ವಿ. ಗೆ ಸನ್ಮಾನ ಮತ್ತು ಬೀಳ್ಕೊಡುಗೆ

Suddi Udaya

ಬಂದಾರು ಗಿರಿಯಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಅಸಹಜವಾಗಿ ಸಾವನ್ನಪ್ಪಿದ ಬಾಲಕ ಸುಮಂತ್ ಮನೆಗೆ:ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪದಾಧಿಕಾರಿಗಳು ಭೇಟಿ

Suddi Udaya
error: Content is protected !!