September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆರಂಬೋಡಿ ಗ್ರಾ.ಪಂ. ಗ್ರಾಮ ಸಭೆ

ಆರಂಬೋಡಿ ಗ್ರಾಮ‌ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ‌ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯರವರ ಅಧ್ಯಕ್ಷತೆಯಲ್ಲಿ ಹೊಕ್ಕಾಡಿಗೋಳಿ ಶಾಲೆಯಲ್ಲಿ ಫೆ. 29 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಗ್ರಾಮಸಭೆಯನ್ನು ಮುನ್ನಡೆಸಿದರು.

ನಾರಾಯಣ ಗುರು ಸರ್ಕಲ್ ಮಾಡಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ ಪಂಚಾಯತ್ ಗೆ ಗ್ರಾಮಸ್ಥ ಹರೀಶ್ ರವರು ಅಭಿನಂದನೆ ತಿಳಿಸಿದರು.

ಅಬ್ಬನಲ್ಕೆ ಮತ್ತು ತುಂಬೆಯಲ್ಲಿ ಟಿಸಿ ಅಳವಡಿಸುವ ಬಗ್ಗೆ ಗ್ರಾಮಸ್ಥರ ಬೇಡಿಕೆಯಿತ್ತು ಇಗಾಗಲೇ ಟಿಸಿ ಅಳವಡಿಸಲಾಗಿದೆ ಮೆಸ್ಕಾಂ ಇಲಾಖೆಯ ಕೆಲಸಕ್ಕೆ ಮೆಚ್ಚುಗೆಯಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಗುಂಡೂರಿನಲ್ಲಿ ವಾರ್ಡ್ ಸಭೆಗೆ ನಾಲ್ಕೂ ಸದಸ್ಯರಲ್ಲಿ ಒಬ್ಬರೂ ಬರಲಿಲ್ಲ.ವಾರ್ಡ್ ಸಭೆಯ ಆಮಂತ್ರಣವನ್ನು ಸದಸ್ಯರಿಗೆ ನಿಡಿಲ್ವ ? ಸದಸ್ಯರೇ ಬರದಿದ್ದರೇ ಗ್ರಾಮಸಭೆಗೆ ಗ್ರಾಮಸ್ಥರು ಬರುತ್ತರಾ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಗುಂಡೂರಿಯಲ್ಲಿ 7 ಬೋರ್ ವೆಲ್ ತೊಡಿಸಿದ್ದೀರಿ. ಇನ್ನೂ ಕಲೆಕ್ಷನ್ ಕೊಡಲಿಲ್ಲ ಯಾಕೆ. ಅವಶ್ಯಕತೆ ಇದ್ದರೆ ಮಾತ್ರ ಬೋರ್ ತೆಗೆಯಬೇಕು. ಇಲ್ಲಂದ್ರೆ ಯಾಕೆ ಎಂದು ಗ್ರಾಮಸ್ಥರು ತಿಳಿಸಿದರು.

5 ಸೆಂಟ್ಸ್ ಕಾಲೋನಿಯ ವಿದ್ಯುತ್ ಕೊರತೆಯನ್ನು ಆದಷ್ಟು ಬೇಗ ನೀಗಿಸಬೇಕು.ಪಾದೆಗುರಿಯಲ್ಲಿ ನೀರಿನ‌ ಪಂಪ್ ಅಳವಡಿಸಬೇಕು.‌ ನೀರಪಲ್ಕೆಯಲ್ಲಿ ಬಸ್ ಸ್ಟ್ಯಾಂಡ್ ಕಳಪೆ ಕಾಮಗಾರಿಯಾಗಿದೆ.ಅಲ್ಲಿಗೆ ಯಾರು ಬರುವಿದಿಲ್ಲ.ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು.ಇಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜುವಾಗುವುದಿಲ್ಲ,ಈ ಸಮಸ್ಯೆಗಳನ್ನು ಬೇಗ ಸರಿಪಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಆರಂಬೋಡಿ ಎರಡನೇ ಬ್ಲಾಕ್ ನಲ್ಲಿ ಒಂದು ವಿದ್ಯುತ್ ದೀಪ ಉರಿಯುವುದಿಲ್ಲ, ಆದಷ್ಟು ಬೇಗ ಸರಿಪಡಿಸಬೇಕೆಂದು ಗ್ರಾಮಸ್ಥರು ತಿಳಿಸಿದರು.ಶೀಘ್ರವಾಗಿ ಸರಿಪಡಿಸುವ ಭರವಸೆಯನ್ನು ಪಂಚಾಯತ್ ನೀಡಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ.ಸ್ಮೃತಿ ಯು ಅನುಪಾಲನಾ ವರದಿ ಸಭೆಯ ಮುಂದಿಟ್ಟರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಬಗ್ಗೆ ತಿಳಿಯಪಡಿಸಿದರು.

ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಹಾಗೂ ಸದಸ್ಯರು,ಅಂಗನವಾಡಿ ,ಆಶಾ ಕಾರ್ಯಕರ್ತರು, ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ಜಂಟಿಯಾಗಿ ಗಣರಾಜ್ಯೋತ್ಸವ ಆಚರಣೆ

Suddi Udaya

ಶಿಶಿಲ: ಹಾವು ಕಡಿತ ಪ್ರಕರಣ-ಉಪ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣದ ಚಿಕಿತ್ಸೆಗೆ ಕರುಣಾಕರ ಶಿಶಿಲರಿಂದ ಮನವಿ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ: 18216 ಮತಗಳ ಅಂತರದಿಂದ ಹರೀಶ್ ಪೂಂಜ ಪ್ರಚಂಡ ಗೆಲುವು: ರಕ್ಷಿತ್ ಶಿವರಾಂಗೆ ಸೋಲು

Suddi Udaya

ಸುಪ್ರೀಂ ಕೋರ್ಟ್ ನಲ್ಲಿ ರಿಜೆಕ್ಟ್ ಆಗಿತ್ತು ಬುರುಡೆ ಪ್ರಕರಣ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪೈಸಾ ಇನ್ಟ್ರೆಸ್ಟ್‌ ಲಿಟಿಗೇಷನ್‌ ಎಂದಿದ್ದ ನ್ಯಾಯಪೀಠ

Suddi Udaya

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಯಂತ್ರೋಪಕರಣ ಖರೀದಿ ಪ್ರಶಸ್ತಿ

Suddi Udaya
error: Content is protected !!